ಕವಿಗೊಂದು ಸಾಲು ಬೇಕಿತ್ತು

ಕವಿಗೊಂದು ಸಾಲು ಬೇಕಿತ್ತು
ಸಾಲವಾದರೂ ಸರಿ
ಭಾವಗಳಿಗೆ ಭಾಷೆ ಬೇಕಿತ್ತು

ಅದೆಷ್ಟು ಹುಡುಕಿದರೂ
ಅಂತರಾಳವೆಲ್ಲ ಖಾಲಿ ಖಾಲಿ
ಬರಿದಾದ ಮನಸಿಗೆಕೋ ಏನೋ
ಅಂಗೈ ಅಗಲದ ಚಾವಿ
ಕಷ್ಟ ಕಾಲಕ್ಕಾಗಲಿ ಎಂದು
ಸ್ವಲ್ಪ ಬಚ್ಚಿಟ್ಟಿತ್ತು
ಅದೆಲ್ಲಿ ಇಟ್ಟನೋ ಕವಿ
ಕವಿತೆ ಕಳೆದು ಹೋಯಿತು...

ಕವಿಗೊಂದಷ್ಟು ಕಂಬನಿ ಬೇಕಿತ್ತು
ಸಾಲವಾದರೂ ಸರಿ
ಮನದ ಭಾರ ಇಳಿಸ ಬೆಕಿತ್ತು.

ನೋವ ನುಂಗುವುದು ಗಂಟಲ ನರ..
ತುಟಿಗಳಿಗೇನು,
ನಗುತ್ತಲೇ ಇರುತ್ತವೆ!!!
ಮೂಕವಾಗಿದ್ದು ಎದೆಯ ಸ್ವರ..
ಕಣ್ಣುಗಳಿಗೇನು,
ಮಾತನಾಡುತ್ತಲೇ ಇರುತ್ತವೆ!!!

ಕವಿಗೊಂದಷ್ಟು ಕನಸು ಬೇಕಿತ್ತು
ಸಾಲವಾದರೂ ಸರಿ
ನೆನಪುಗಳಿಗೆ ನೆರಳು ಬೇಕಿತ್ತು.

14 comments:

  1. well, ur prev post says u dream a lot...but then, this post contradicts the prev post...konegondu kanasu beku andre en artha?? ille hele aldane??? and good that u dream....
    -Harsha Bhat

    ReplyDelete
  2. @ harshaಭಟ್ರೇ ಇದು ನನ್ನ ಕನಸಿನ ಜೋಳಿಗೆ..
    ಮತ್ತೆ ಅಷ್ಟೆಲ್ಲ ಕನಸು ಕಾಣೋ ಕವಿಗೆ ಕನಸಿಗೆ ಬರ ಅಂದ್ರೆ ಕವಿಯ ಪರಿಸ್ಠಿತಿ ಹೆಂಗಿದ್ದಿಕ್ಕು ಹೇಳಿ.. ಅಲ್ದಾ?

    @ sandeepa..
    thanks.. :)

    ReplyDelete
  3. "ಅಲ್ಪಜ್ಞ" ಸಂದೀಪನ post ನೋಡಿ ಇಲ್ಲಿಗೆ ಬಂದಿ.. ಚೆನ್ನಾಗಿದ್ದು.. ಬರೀತಿರು

    ReplyDelete
  4. ಕವಿತೆಯನ್ನ ಹುಡುಕುತ್ತಲೇ ಉತ್ತಮವಾದ್ದನ್ನ ಎತ್ತಿ(ಕಟ್ಟಿ) ಕೊಟ್ಟದ್ದೀರಿ!

    ReplyDelete
  5. ತುಂಬಾ ಚೆನ್ನಾಗಿದ್ದು.

    ReplyDelete
  6. ಭಾವಪೂರ್ಣ ಕವಿತೆ.

    ReplyDelete
  7. to Simma
    ಧನ್ಯವಾದಗಳು.

    to yajnesha
    ಧನ್ಯವಾದಗಳು.

    to sunnath
    ಭಾವನೆಗಳ ಹುಡುಕಾಟದಲ್ಲಿ ಬರೆದ ಕವಿತೆ ಅದು.. ನಿಮಗಿಷ್ಟವಾಗಿದ್ದು ಕವಿಗೆ ಭಾವನೆಗಳು ಸಿಕ್ಕಂತಾಯಿತು.
    ಧನ್ಯವಾದಗಳು.

    ReplyDelete
  8. ನೋವ ನುಂಗುವುದು ಗಂಟಲ ನರ..
    ತುಟಿಗಳಿಗೇನು,
    ನಗುತ್ತಲೇ ಇರುತ್ತವೆ!!!
    ಮೂಕವಾಗಿದ್ದು ಎದೆಯ ಸ್ವರ..
    ಕಣ್ಣುಗಳಿಗೇನು,
    ಮಾತನಾಡುತ್ತಲೇ ಇರುತ್ತವೆ!!!
    ee saalugala bagge hege prathikriyisodu nijakku adhbut

    ReplyDelete
  9. Hi Nivedita,

    Kavite tumba chennagi bardidira...
    Keep it up.....

    ReplyDelete
  10. ನಿವೇದಿತ, ಕವಿತೆ ತುಂಬಾ ಸೊಗಸಾಗಿದೆ. " ಸಾಲವಾದರೂ ಸರಿ, ನಿಮ್ಮದೊಂದಿಷ್ಟು ಭಾವನೆಗಳನ್ನು ನನಗೂ ಕೊಡಿ!" ಕವಿತೆ ಓದುತ್ತ ಓದುತ್ತ ಹಿಡಿದಿಡುತ್ತದೆ. ಭಾವನೆಗಳು ಚೆನ್ನಾಗಿ ವ್ಯಕ್ತವಾಗಿದೆ. ನಿಮ್ಮ ಬ್ಲಾಗಿಗೆ ನಾನೊಬ್ಬ ಹೊಸ ಸೇರ್ಪಡೆ.
    ಶುಭವಾಗಲಿ.

    -ವಿನಯ್.

    ReplyDelete
  11. "ಕವಿಗೊಂದಷ್ಟು ಕಂಬನಿ ಬೇಕಿತ್ತು
    ಸಾಲವಾದರೂ ಸರಿ
    ಮನದ ಭಾರ ಇಳಿಸ ಬೆಕಿತ್ತು"
    Ninnee salugalu prathibbralu kabani midisthade...

    ReplyDelete

Foot prints