
ನಡೆದ ದೂರಕ್ಕೂ ಹೆಜ್ಜೆ ಗುರುತು.
ಬೆರಳ ಸರಪಳಿಗೆ ಮೆತ್ತೆನೆಯ ಮುತ್ತು..
ಮರಳು,ಮಸುಕು..
ಮಂಜು,ಬೆಳಕು..
ನಾಳೆಯೆಲ್ಲಾ ಕನಸಿನ ನಾಳೆಯಂತೇ..
ನಿದ್ದೆಗೆಲ್ಲಿ ಸಮಯ??
ಮನಸೆಲ್ಲಾ ನಿನ್ನೆದೆಯಲ್ಲಿದೆ..
ಕಣ್ಣು ಕಪ್ಪು..
ಕಾಂಬೋ ಕನಸಿಗೆ....ಎಷ್ಟೋಂದು ಬಣ್ಣ!!
ನೀನು, ನಿನ್ನ ನಗು
ಬಿಸಿಲು ಮಳೆ...
ನೀನು, ನಿನ್ನ ನೆನಪು
ಮುಗುಳು ನಗೆ ತುಟಿಯ ಮೇಲೆ..
ಹನಿ ಹನಿಸೋ ಆಕಾಶ..
ನವಿರೇಳಿಸುವ ತಂಗಾಳಿ..
ಗಾಜು - ಕಿಟಕಿಯ ತುಂಬಾ
ನಿನ್ನ ಹೆಸರೇ.. ಗೀಚುವ ಬೆರಳಲಿ..
ನಡುಕ..
ಉಸಿರು ಉಸಿರೂ..
ಒದ್ದೆ ಒದ್ದೆ...
ನೀನು, ನಿನ್ನ ಪ್ರೀತಿ..
ಅಮಲು, ಅಭ್ಯಾಸ
ನೀನು, ನಿನ್ನಪ್ಪುಗೆ
ಆಸೆ, ಅನುರಾಗ...
ಹಸಿರುಗಪ್ಪು ಕಾಡು..
ಬೆಳದಿಂಗಳು.
ನಕ್ಷತ್ರಗಳೆಣಿಕೆಗೆ,
ನಿನ್ನ ಕೈ ಬೆರಳು..
ನದಿಯ ರಾಗ
ಭಾವ,ಭಾಷೆ ನಿನ್ನದು
ಬಿಸಿಲೊಡೆದು ಬಣ್ಣವಾಗುವಾಗ
ಕನಸು ನನ್ನದು..
12 comments:
ಇಷ್ಟವಾಯ್ತು :) ಚೆನ್ನಾಗಿದೆ..
ನದಿಯ ರಾಗ
ಭಾವ,ಭಾಷೆ ನಿನ್ನದು
ಬಿಸಿಲೊಡೆದು ಬಣ್ಣವಾಗುವಾಗ
ಕನಸು ನನ್ನದು..
chennaagide Nivs.
@Gautam
Thanks :)
@Jagali bhaagavata
Bhaagavatare.. Thanks.. :)
chenngide
@ Raaghavendra
Thank you :)
super, u have a unique talent,,,nice...
@Ravikiran
Thank you :)
tumba sundara kavite.. bhava ishta aytu..
biduvinalli ello beti kodi
www.vanishrihs.blogspot.com
ನಿನ್ನೆದೆಯಲ್ಲಿದೆ..ಕಣ್ಣು ಕಪ್ಪು..ಕಾಂಬೋ ಕನಸಿಗೆ....ಎಷ್ಟೋಂದು ಬಣ್ಣ!!ನೀನು,
Sooper Niveditaa....Nivedane..prastaavane..ellaa....good luck..
ಸಾಲುಗಳು ತುಂಬಾ ಚೆನ್ನಾಗಿವೆ. ಇಷ್ಟವಾಯ್ತು
@vanishree
Thank you..
@Jalanayana
Hmmm.. Those are my fav lines too..
Thank you.
@NRK
Thank you..
very nice..
Post a Comment