ನನ್ನ ನಾನು ಹುಡುಕುತ್ತಿಲ್ಲ...



ಬಿದಿಗೆಯ ಸಂಜೆ
ಕೆಂಪು ಬಾನಾಚೆಯ ಚಂದ್ರ
ದ್ರಿಷ್ಟಿಗಿಟ್ಟಂತೆ ಹೊಳೆವ ಚುಕ್ಕಿ.
ಗಾಳಿಗೆದರಿದ ಸಂಜೆ ಧೂಳು
ನೆನಪ ಜೊತೆಯಲ್ಲಿ
ಹಜ್ಜೆಗೆ ಹೆಜ್ಜೆಯ ಜೊತೆ
ಉಸಿರು ಉಸಿರೂ ಬೆಚ್ಚಗಿನ ಹೊಗೆ
ಬೀಸು ಗಾಳಿಗೆ ಚೆಲ್ಲುವ ಕನಸು ನೂರು
ಕಳೆದು-ಹೋಗಲೇ ಹೊರಟ ಪಯಣ
ಕಳೆದು ಹೋದರೆ ಹುಡುಕ ಬೇಡಿ..
ಸಿಕ್ಕರೆ ಗುರುತಿಸಬೇಡಿ
ನನ್ನ ನಾನು ಹುಡುಕುತ್ತಿಲ್ಲ..


Well..
ಅದಾವಾಗಲೋ ಬರೆದ ಸಾಲುಗಳು.. ನನಗೋ ನೆನಪಿಲ್ಲ.. ಆದರೆ ಇವತ್ತು ಈ ಕವಿತೆಯ ಭಾವನೆ ನನ್ನಲ್ಲಿ ಮತ್ತೆ ಮೂಡಿದೆ. ಕಳೆದು ಹೋಗಬೇಕು ಅನ್ನಿಸ್ತಿದೆ. ಹೊಸ ವರ್ಷಕ್ಕೆ ಹೊಸದೇನು wish ಮಾಡಲಿ ಗೊತ್ತಾಗ್ತಾ ಇಲ್ಲ.. ಹಿಂದನ ವರ್ಷದ್ದೆ ಅದೆಷ್ಟು ಬಾಕಿಯಿದೆ..
ಈಗಾಗಲೇ ತುಂಬಾ ಮಾಡೋದಿದೆ.. ಕನಸು ಕಾಣೋದಕ್ಕೆ ಸಮಯ ಎಲ್ಲಿ??
Anyways.. Happy new year.. All the best.