ಮೊನ್ನೆ ನಮ್ಮ ಮನೆಗೆ ನನ್ನ ಆಯಿ(ಅಮ್ಮನ ಅಮ್ಮ) ಬಂದಿದ್ರು. ರಾತ್ರಿ ಊಟದ ಹೊತ್ತಿಗೆ ಅಮ್ಮ ಯಾಕೊ ನನ್ನ ಬಾಲ್ಯದ ಮಾತೆತ್ತಿದ್ರು.ಆಯಿ ಮನೆಯಲ್ಲಿದ್ದಿದ್ದು ತುಂಬಾ ಒಳ್ಳೆಯದಾಯ್ತು, ಆಯಿ ಅವರ ಕಾಲದ ಕೆಲವು incidentsಗಳನ್ನ ಹೇಳ್ತಾ ಹೋದ್ರು..and this one is my favourite.. ನನ್ನ ಆಯಿಯ ಭಾಷೆಯಲ್ಲೆ ಹೇಳ್ತೀನಿ.
"ನಿವೇದಿತಾ, ನಿನ್ನ ಅಮ್ಮ ಎಂತಾ ರಾಶಿ ಸಂಭಾವಿತಾ ಹೇಳಿ ಅಂದಕ್ಯಳಡಾ. ಆದು ಶಣ್ಣಿರಕಿದ್ರೆ ಬೇಕಾದಷ್ಟು ಹೋಳಿ ಮಾಡಿದ್ದು. ಆದ್ರೂವಾ ಯನ್ನ ಮಾವನವರಿಗೆ ಮಾತ್ರಾ ಶೈಲಜನ್ನ ಕಂಡ್ರೆ ರಾಶಿನು ಪ್ರೀತ್ಯಾಗಿತ್ತು.(btw ಶೈಲಜಾ ಅಂದ್ರೆ ನನ್ನ ಅಮ್ಮ) ಅದಕ್ಕೊಂದು ಯಾವತ್ತೂ ಹೊಡೆಯಲಿತ್ತಿಲ್ಲೆ..ಒಂದೊಂದ ಸಲ ಇವಿಬ್ರೂ ಸೇರಿಕ್ಯಂಡೆಯಾ ಹೋಳಿ ಮಾಡ್ತಿದ್ದ. ಯಂಗಿನ್ನೂ ನೆನಪಿದ್ದು.. ಮಾವನವರಿಗೆ ಅವಲಕ್ಕಿ ಮೊಸರು ಅಂದ್ರೆ ಶಣ, ಎಷ್ಟು ಇಷ್ಟ ಅಂಬೆ.. ದಿನಾ ಅದ್ರೆ ಕೊಟ್ರೂ ಖುಷಿ ಖುಷಿ ತಿಂತಿದ್ರು. ಯಲ್ಲಾದ್ರೂ ನೆಂಟರ ಮನಿಗೆ ಹೋದ್ರೂವಾ ಆಸರಿಗೆ ಅವಲಕ್ಕಿ ಮಜ್ಜಿಗೆನೇ ಅಡ್ಡಿಲ್ಲೆ ಹೇಳ್ ಬುಡತಿದ್ರು. ಸಂಗತಿಗಿದ್ದವ್ವೂವಾ ಬ್ಯಾರೆ ಗತಿ ಇಲ್ಲದ್ದೆಯಾ ಅದನ್ನೆ ತಿಂನ್ನಕಾಗಿತ್ತು.. ಈ ಹುಡ್ರು ಶಾಲೆಯಿಂದ ಮನಿಗೆ ಸಂಜಿಗೆ ಬಂದಾಗ ಅವಕ್ಕೆನಾದ್ರು ಅವಲಕ್ಕಿ ಮಜ್ಜಿಗೆ ಹಶಿವಿಗೆ ಕೊಟ್ರೆ ಮಾವನವ್ರಿಗೂ ಕೊಡಕಾಗಿತ್ತು..ಅಷ್ಟ ಇಷ್ಟ ಅವರಿಗೆ ಅವಲಕ್ಕಿ ಮಜ್ಜಿಗೆ ಅಂದ್ರೆ!!
ಪಾಪ ಯಮ್ಮನೆ ಅತ್ತೆರಿಗೆ ಅವಲಕ್ಕಿ ಮಜ್ಜಿಗೆ ಅಂದ್ರೆ ಅಷ್ಟೆಲ್ಲ ಚೊಲೊ ಅಲ್ಲ.. ಮಾವನವ್ರ ಇನಮನಿ ಅವಲಕ್ಕಿ ಮಜ್ಜಿಗೆ ಮಳ್ಳ ನೋಡಿ ಅತ್ತೇರು ಅವರಿಗೆ ಬೈದಿದ್ರು.. ಅವತ್ತಿನಿಂದಾss ಅವರು ಚೊಲೋss idea ಮಾಡಿಕ್ಯ ಬುಟ್ರು.
ಯಲ್ಲಿಗೆ ಹೋಪದಿದ್ರೂ ಶೈಲಜನ್ನ ಕರಕಂಡು ಹೋಗ್ತಿದ್ರು.. ಅದರ ಕಿವಿಯಲ್ಲಿ ಶಣ್ನಕೆ "ಶಣಾ ಅವು ಆಸರಿಗೆ ಕೇಳದ್ರೆ ಅವಲಕ್ಕಿ ಮಜ್ಜಿಗೆ ಬೇಕು ಹೇಳಿ ಹೇಳಲಾಗಾ ಅಕಾ" ಹೇಳಿ ಹೇಳಿಟ್ಬುಡತಿದ್ರು.. ಈ ಕೂಸಿಗೂ ಅವಲಕ್ಕಿ ಮಜ್ಜಿಗೆ ನೆನಪ್ ಮಾಡಿಕೊಟಂಗೆ ಆತ??ಮತ್ತೆ ಕೇಳವ?? ಇದು ಮುದ್ದಾಮ್ ಅವಲಕ್ಕಿ ಮಜ್ಜಿಗೆ ಬೇಕು ಹೇಳೇ ಹೇಳತಿತ್ತು.. ಕಡಿಗೂ ಮಾವನವ್ರಿಗೆ ಅವಲಕ್ಕಿ ಮಜ್ಜಿಗೆ ಸಿಕ್ಕಂಗಾತು.."
ಹಮ್.. ಹೀಗಿತ್ತು ನನ್ನ ಮುತ್ತಜ್ಜನ ಕಾರನಾಮೆಗಳು.
ಮಾರನೆ ದಿನ ಅಮ್ಮ ಯಾವುದೋ ಕೆಲಸಕ್ಕೆ ಯಲ್ಲಪುರದ ಯಾರದೋ ಮನೆಗೆ ಹೋಗಬೇಕಿತ್ತು.. ನಾನು ಅಮ್ಮನ ಕಿವಿಯಲ್ಲಿ ಸಣ್ಣದಾಗಿ, "ಅವಲಕ್ಕಿ ಮಜ್ಜಿಗೆ ಬೇಕು ಹೇಳಿ ಹಟ ಮಾಡಡಾ ಶಣಾ" ಎಂದು ಹೇಳಿದಾಗ ಅಮ್ಮಂಗೆ ನಗು ತಡೆದು ಕೊಳ್ಳೋದು ಕಷ್ಟ ಆಯ್ತು..
ಆ ’ಶಣಾ’ ’ಶಣಾ’ ಅನ್ನೋದು ಒಳ್ಳೇ ಚನಾಗಿದ್ದು.. :)
ReplyDeleteಮತ್ತೇ, ನಂಗೂ ಇಷ್ಟ ಅವ್ಲಕ್ಕಿ-ಮಜ್ಗೇ.. ನಾ ಶಾಲಿಂದ ಬಂದ್ಕೂಡ್ಲೆ ಅಮ್ಮ ಕೊಡ್ತಿದ್ದದ್ದು ಅದ್ನೇಯ.. ನೆನ್ಪಾಗ್ತಿದ್ದು, ಅದರ ಹುಳಿಶೀಂ ರುಚಿಯ ಸಮೇತ..
ಹವ್ಯಕ ಭಾಷೆಯ ಬರಹ ಚೊಲೋ ಬಂಜು :-)
ReplyDelete@ ಸುಶ್ರುತ ದೊಡ್ಡೇರಿ
ReplyDeletethanks :-), ನಿಜ.. ಆ ಅವಲಕ್ಕಿ ಮಜ್ಜಿಗೆ ರುಚಿನೇ ಹಂಗೆ.. ಅವಲಕ್ಕಿ ಮಜ್ಜಿಗೆ, ಹಲಸಿನ ಕಾಯಿ, ಬಾಳೆ ಕಾಯಿ ಸಂಡಿಗೆ.. ಆವಾಗವಾಗ ಸಂಜಿಗೂವಾ ಶಿಂಯಾ ದ್ವಾಸೆ ( ದೋಸೆ ಅನ್ನಕ್ಕಿಂತಾ ದ್ವಾಸೆ ಅಂದ್ರೆ ಸರಿ ಅಲ್ದಾ?).. ನೆನಪು ಮಾಡಿಕ್ಯಂಡ್ರೆ ಖುಶಿ ಆಗ್ತು..
@ harish
thanks..
ಆಪ್ತವಾಗಿದೆ. ಅಮ್ಮನಿಗಿಂತ ಮುತ್ತಜ್ಜನದೇ ಕೇಂದ್ರಪಾತ್ರ ಅನ್ನಿಸುವ ಹಾಗಿದೆ. ಖುಶಿ ಕೊಡ್ತು ಬರಹ.
ReplyDeleteಹವ್ಯಗನ್ನಡದಲ್ಲಿ ಚೆನ್ನಾಗಿ ಬರ್ದಿದೀರಿ. ಕೆಲವೊಂದು ಪದಗಳಿಗೆ ಗ್ರಾಂಥಿಕ ಕನ್ನಡದ ಸಂವಾದಿ ಪದಗಳನ್ನೂ ಕೊಡಿ (ನಮ್ಮಂಥವ್ರಿಗಾಗಿ :-)
’ಶಣಾ’ ಅಂದ್ರೆ? ಸಣ್ಣವಳು ಅಂತಾನ?
@ jagali bhaagavata
ReplyDeleteಬಹುಶಃ ಹೌದು... ಶಣಾ ಅಂದ್ರೆ ಸಣ್ಣವಳು/ಸಣ್ಣವನು ಅಂತಾ.. ಅದ್ರೆ ಅದನ್ನ ಪ್ರೀತಿಯಿಂದ ಕರೆಯೊದಕ್ಕೆ ಬಳಸೋದು ಜಾಸ್ತಿ.
ತುಂಬಾ ಚೆನ್ನಾಗಿದೆ. ಹವ್ಯಕ ಭಾಷೆ ತುಂಬಾ ಚೆಂದ !
ReplyDeleteraashi cholo baridde koose....mast nagu bantu....le...havyaka bhashe mast kaantu odale....KIU...mundina kelavu post alli kooda nangla bhashe upiyogisidre maja bartu odale...enambe??
ReplyDeleteಅಡ್ಡಿಲ್ಲೆ ಭಟ್ರೇ, ಅಲ್ದಾ ನೀನು ಕೇಳದ್ ಹೆಚ್ಚ, ಯಾನು ಬರೆಯದ್ ಹೆಚ್ಚ?
ReplyDeleteChennagi moodibandide...
ReplyDeleteAvalakki majjige bagge illondu ankanavannu nodi...
"Neneyabeku, Neneyabeku" at
http://vish-myblog.blogspot.com/2006_12_01_archive.html
--
Vishwa
ಸುಪರ್ ಬ್ಹಾಷೆ ಮತ್ತು ಶೈಲಿ. ಸಿರ್ಸಿ ಕಡೆ ಹವ್ಯಕರೂ ಯಾರೋ ಮಾತಾಡ್ತ ಇದ್ದಂಗೆ ಆತು.
ReplyDelete