ಬದುಕು ನಿರಂತರ

Hi,
This is one of my poems which I think needs some explanation of the context.The poem below depicts our thoughts every time we face some problem or a challenge. We , all of us get some thoughts(may be Nobel or weired ) before facing a problem and those thougts vary from one mind to the other, one situation to the other. We all overcome the -ve thoughts and move forward.. right??
Hmmm.. so I have put those (kind of) thoughts in this poem taking blowing wind (1st para), flowing water stream(2nd para) and blooming bud(3rd para) as my chatacters.. as if they are thinking before blowing, flowing and blooming resptly..
Hope you ll enjoy it. Now I give my poem to You.
ಬದುಕು ನಿರಂತರ

ಹಾದು ಹೋಗುವ ಮೊದಲು
ಸುತ್ತೆಲ್ಲ ನೋಡಿದೆ ಒಮ್ಮೆ
ಸುಟ್ಟು ನಿಂತಿದೆ ಬಟ್ಟ ಬಯಲು,
ಬೆಂಕಿ ಆರಿದರೂ ಕಾವಿನ್ನೂ ಇಳಿದಿಲ್ಲ
ಕೆಂಡ ಕೆಂಪಲ್ಲ...
ಕಪ್ಪೂ ಅಲ್ಲವಲ್ಲ!!??
ಅಹ್!!
ನನಗೇಕೆ ಕೆಂಡದ ಬಣ್ಣ ಬೇಕು?
ಬೆಂಕಿಯ ಬಿಸಿ ಸುಡದೆ ಹೋದರೆ ಸಾಕು.
ಗ್ಜೂಂಗುಡುತ್ತಾ, ಕಾವು ನುಂಗುತ್ತಾ ಬೀಸಿಹೋದೆ..
ಸುಟ್ಟಿದೆ,
ಆದರೆ ಗಾಯವಾಗಿಲ್ಲ.

ಹೆಜ್ಜೆಯಿಡುವ ಮೊದಲು
ಒಂದು ನಿಮಿಷ ನಿಂತುಕೊಂಡೆ
ಪಾಚಿಗಟ್ಟಿದೆ ಆಳದ ನೆಲ
ಹೆಣೆದು ನಿಂತಿದೆ ಹಸಿರು ಜಾಲ
ಸಿಕ್ಕಿಕೊಂಡು ಬಿಡುತ್ತೇನೆ??
ಮುಳುಗಿ ಹೋಗುತ್ತೇನೆ?
ಏನು ಮಾಡಲಿ?
ಹಿಂದೆ ಸರಿಯಲೆ?
ಛೆ!!
ಎಚ್ಚರಿಕೆಯಿಂದ ಇದ್ದರಾಯಿತು,
ಜಾರಿದರೆ, ಎದ್ದು ಹೊರಟರಾಯಿತು,
ಕುಲುಕುತ್ತಾ,ತಳುಕುತ್ತಾ ಹರಿದುಹೋದೆ...
ಕಾಲು ಜಾರಿತು,
ಬಿದ್ದು ಗಾಯವೂ ಆಯಿತು..
ಆದರೆ ಗಯದ ಅಚ್ಚಿಲ್ಲ.

ಅರಳುವ ಮೊದಲು
ಕಣ್ಮುಚ್ಚಿ ನಿಂತೆ
ಗಾಳಿಯ ತಂಪಿಗೆ ಮೈಯಲ್ಲಿ ನಡುಕವಿದೆ,
ದೂರದ ಕೆಂಪು ಬಿಸಿಲು ನನ್ನೇ ಹುಡುಕಿ ಹೊರಟಂತಿದೆ,
ಮುದುರಿ ಬಿಡುತ್ತೇನಲ್ಲ?
ಉದುರಿ ಹೋಗುತ್ತೇನಲ್ಲ??!!
ಏನು ಮಾಡಲಿ?
ಅಹ್!! ನನ್ನಂತೆ ನೂರಾರು,
ಎಲ್ಲರಂತೆ ನನದೂ ಚೂರು ಪಾರು,
ಇರುವಷ್ಟು ಹೊತ್ತೂ ನಕ್ಕು ಬಿಡುತ್ತೇನೆ,
ರಸ ಹಂಚಿ ಜೇನಾಗುತ್ತೇನೆ.
ಅರಳಿ ನಿಂತೆ...
ಕೆಂಪು ಬಿಸಿಲು ತಂಪಾಗುವ ವೇಳೆಗೆ
ಉದುರಿಯೂ ಹೋದೆ..

ಆದರೂ ನನಗಿಲ್ಲ ಬೇಸರ..
ಬದುಕು ನಿರಂತರ.

2 comments:

SAFAHL said...

Nimma kavitegalu tumba chennagive

Niveditha said...

ಧನ್ಯವಾದಗಳು..