ಬಿದಿಗೆಯ ಸಂಜೆ
ಕೆಂಪು ಬಾನಾಚೆಯ ಚಂದ್ರದ್ರಿಷ್ಟಿಗಿಟ್ಟಂತೆ ಹೊಳೆವ ಚುಕ್ಕಿ.
ಗಾಳಿಗೆದರಿದ ಸಂಜೆ ಧೂಳುನೆನಪ ಜೊತೆಯಲ್ಲಿ
ಹಜ್ಜೆಗೆ ಹೆಜ್ಜೆಯ ಜೊತೆಉಸಿರು ಉಸಿರೂ ಬೆಚ್ಚಗಿನ ಹೊಗೆ
ಬೀಸು ಗಾಳಿಗೆ ಚೆಲ್ಲುವ ಕನಸು ನೂರುಕಳೆದು-ಹೋಗಲೇ ಹೊರಟ ಪಯಣ
ಕಳೆದು ಹೋದರೆ ಹುಡುಕ ಬೇಡಿ..ಸಿಕ್ಕರೆ ಗುರುತಿಸಬೇಡಿ
ನನ್ನ ನಾನು ಹುಡುಕುತ್ತಿಲ್ಲ..Well..
ಅದಾವಾಗಲೋ ಬರೆದ ಸಾಲುಗಳು.. ನನಗೋ ನೆನಪಿಲ್ಲ.. ಆದರೆ ಇವತ್ತು ಈ ಕವಿತೆಯ ಭಾವನೆ ನನ್ನಲ್ಲಿ ಮತ್ತೆ ಮೂಡಿದೆ. ಕಳೆದು ಹೋಗಬೇಕು ಅನ್ನಿಸ್ತಿದೆ. ಹೊಸ ವರ್ಷಕ್ಕೆ ಹೊಸದೇನು wish ಮಾಡಲಿ ಗೊತ್ತಾಗ್ತಾ ಇಲ್ಲ.. ಹಿಂದನ ವರ್ಷದ್ದೆ ಅದೆಷ್ಟು ಬಾಕಿಯಿದೆ..
ಈಗಾಗಲೇ ತುಂಬಾ ಮಾಡೋದಿದೆ.. ಕನಸು ಕಾಣೋದಕ್ಕೆ ಸಮಯ ಎಲ್ಲಿ??
Anyways.. Happy new year.. All the best.
4 comments:
ಕವಿತೆ ಇಷ್ಟವಾಯ್ತು.
ಹೊಸ ವರ್ಷದ ಶುಭಾಶಯಗಳು
kavithe hathusala odide. chennagide. artha mathra agilaa :).
He He.
Heppew New year to you and everyone who visit to niveditha's kanasina pettge.
@ಆನಂದ
ಧನ್ಯವಾದಗಳು.. :)
@ammud
ಕವಿತೆ ಅಷ್ಟು complicated ಆಗಿ ಇದೆಯಾ??
Anyways.. Happy new year to U too..
'ಕಳೆದು-ಹೋಗಲೇ ಹೊರಟ ಪಯಣ'..
ಸಾಲುಗಳು ತುಂಬಾ ಮುದ ಕೊಟ್ಟವು, ಚಿಂತನೆಗೂ ಹಚ್ಚಿದವು..
ನಾವು ಹಾಗೆ ಕಳೆದುಹೋಗಲೆಂದೇ ಪಯಣ ಹೊರಟಾಗಲೇ ಹೊಸ 'ನಮ್ಮನ್ನು' ಹುಡುಕಿಕೊಳ್ಳೋದು ಅಂತ ನನ್ನ ಗಟ್ ಫೀಲು.ಯಾಕೆಂದರೆ ಅಲ್ಲಿ ಗುರಿಯ ಹಂಗಿರುವುದಿಲ್ಲ.
ಹೊಸ ವರ್ಷದಲ್ಲಿ ಇನ್ನಷ್ಟು ಹೊಸ ಹಾದಿಗಳು ತೆರೆದುಕೊಳ್ಳಲಿ ಎಂದು ಹಾರೈಸುತ್ತ..
-ವಿನಾಯಕ ಕುರುವೇರಿ
Post a Comment