ನೀನಿಲ್ಲದ ಊರಲ್ಲಿ - 4


I am so much in love with Bangalore.
ಸಂಜೆಗೊಂದು ಟಪ ಟಪ ಉದುರೋ ಮಳೆ, ಮಳೆಗಿರುವ ಗಂಧ, ಅದರ ಜೊತೆಗೇ ತೆಲಿ ಬರುವ ನೆನಪುಗಳು..
ನೆನಪಿದೆಯ ನಿನಗೆ, ನಾವಿಬ್ರು ಆವತ್ತು ಆಂಜನೆಯ ದೇವಸ್ಥಾನದ ಹಿಂದಿನ ರಸ್ತೆಯಿಂದ ಅಲ್ಲಿರೋ ಗುಡ್ಡಕ್ಕೆ ಹೋದಿದ್ದು?? ಮೆಳೆಗೂ ಮೊದಲು ಗಾಳಿ ಇರತ್ತಲ್ಲಾ, ಆ ಥರದ ವಾತಾವರಣ.ಹ್ಮ್ಮ್ಮ್... ಇವತ್ತಿನ ಗಾಳಿಗೂ ಅದೇ ಪರಿಮಳ..
ನಿನ್ನ ಬೈಕ್ ಮೇಲೆ , ನಿನ್ನ ಅಪ್ಪಿಕೊಂಡು ಹೋಗೋ ಸುಖ. ಘಳಿಗೆಗೊಮ್ಮೆ ನಿನ್ನ ಭುಜಕ್ಕೆ ಮೆತ್ತನೆಯ ಮುತ್ತು. ನೀನು ನಿನ್ನ rear mirrorನಿಂದ ನನ್ನ ನೋಡಿದಾಗಲೆಲ್ಲ, ಅದೇನೋ ಒಂದು ನಾಚಿಕೆ.
ಆ ಬೆಟ್ಟವಾದ್ರೂ ಎಷ್ಟು ಚಂದ ಇತ್ತು ಅಲ್ವಾ?? ಆಗ ತಾನೆ ಮುಳುಗಿದ ಸೂರ್ಯನ ನೆರಳನ್ನ ಹಿಡಿಯೋ ಪ್ರಯತ್ನದಲ್ಲಿ ಆಕಾಶ, ಕೆಂಪು ಅಲ್ಲಾ, ಗುಲಾಬಿಯೂ ಅಲ್ಲದ ಬಣ್ನಕ್ಕೆ ತಿರುಗಿತ್ತು. ನಿನ್ ಕೈಯಲ್ಲಿ, ಕೈಯ ಬೆಸೆದು, ಬೆರಳುಗಳ ಸರಪಳಿ ಮಾಡಿ ನಡೆಯುವುದೇ ಸಂಭ್ರಮ ನಂಗೆ. ಅಂತೂ ಬೆಟ್ಟದ ತುದಿ ಹೋಗಿ ತಲುಪಿದಾಗ ಸಣ್ಣ ಸಣ್ಣ ಮಳೆಯ ಹನಿ ನಮ್ಮಿಬ್ಬರ ಕೆನ್ನೆ ಮೆಲೆ ಉದಿರಿದ್ದು..
ಅಹ್ ನಿನ್ ಜೊತೆ ಕಳೆದ ಪ್ರತಿಯೊಂದು ಸಂಜೆಗೂ ಒಂದೊಂದು ಕಥೆ ಇದೆ..
ಈಗ ಯೋಚನೆ ಮಾಡ್ತೀನಿ, ನಮ್ಮಿಬ್ಬರ ನಡುವೆ ನಡೆದಿದ್ದೆಲ್ಲ ಕನಸಾ?? ನನ್ನ ಕಲ್ಪನೆಯಾ??
ಅದೇನೇ ಆದರೂ ನೀನು ನನಗೆ ಕೊಟ್ಟಿದ್ದು ತುಂಬಾ ಸುಂದರ ನೆನಪುಗಳನ್ನ. ಕಣ್ ಮುಚ್ಚಿದರೆ ತನ್ ತಾನೇ ಅರಳೋ ಮುಗುಳು ನಗೆಯನ್ನ..
ನೀನಿಲ್ಲದ ಊರನ್ನೂ ಇಷ್ಟ ಪಡೋ ಪ್ರೀತಿಯ ಮನಸನ್ನ.
ನೀನು ನನಗೆ ಈ ಮಳೆ ಥರ.. ನೆನಪು ಬಂದಾಗ ಮಾತ್ರ ಮನಸ್ಸು ಒದ್ದೆ, ಒದ್ದೆ.


P.S : Part-1

Part -2
Part -3

4 comments:

ದಿನಕರ ಮೊಗೇರ said...

waav. ravi beLegereya lov lavike ya ardha bhaaga Odida haagaayitu....

Ammud said...

Akalika male bengurulli biddide. Malegalanda ondu snaje nenapanna chennai varnane madidiri. Photo is awesome

Niveditha said...

@Dinakara
Its always good to get comments from you.. Thank you :)

@Ammud
:) Thank you..

Satish24K said...

Good Blog,... it feels fresh