ಅಜ್ಜನ ಮನೆ ಕತೆ...

ದೃಶ್ಯ:
ನನ್ನ ಅಜ್ಜನಮನೆಯ ಗಂಗಾಸಮಾರಧನೆ. ಮೂರನೆ ಪಂಗ್ತಿ ಊಟ ಆಗಿ ಬಳಗ್ತಾ ಇದ್ದ( ನೆಲ ಒರೆಸುವ ಒಂದು ವಿಧಾನ). ಕಿಡಕಿ ಕಟ್ಟೆ ಮೇಲೆ ಮನೆಗೆ ಬಂದ ನೆಂಟರು ಸುಮಾರು ಜನ ಕುಂತ್ಗಂಡು ಸುದ್ದಿ ಹೊಡೀತಾ ಇದ್ದ. ನಾನೂ ಬಡಿಸಿದ್ದ ಕೈಯೆಲ್ಲ ತೊಕ್ಕಂಡು ಬತ್ತಾ ಇದ್ದಿದ್ದಿ.

ಸಂಭಾಷಣೆ:
ಗೀತತ್ತೆ (ನನ್ನ ಅತ್ತೆ): "ಅಲ್ದೆ ನಿವೇದಿತಾ.. ಅವರ ಮನೆ ಶ್ವೇತಕ್ಕನ ಮದುವೆಯಲ್ಲಿ, ಗಂಡಿನ ಬದಿಯವ್ವು, ಶ್ವೇತಂಗೆ ಇಷ್ಟ ಹೇಳಿ ತಂದೂರಿ ರೊಟ್ಟಿ ಮಾಡಿದಿದ್ವಡಾ.. ನಿನ್ನ ಮದುವೆಗೆ ಯಂತಾ ಮಾಡಕಾತೆ??"
( ನಾನು ’ಮತ್ತೆ- ನನ್ನ- ಮದುವೆ- ವಿಷಯ-ಹಮ್ಮ್..’ ಅಂತಾ expression ಕೊಟ್ಟಿಕ್ಕೆ ಇನ್ನೆಂತೊ ಹೇಳ ಹೇಳೀ ಇದ್ದಿದ್ದಿ)
ಸವಿತಕ್ಕಾ( ನನ್ನ ಚಿಕ್ಕಮ್ಮ- ನಾನು ಕರ್ಯದು ಅಕ್ಕಾ ಹೇಳಿ) :" ಅಯ್ಯಾ.. ಯಮ್ಮನೆ ನಿವೇದಿತನ ಮದ್ವೆಗೇsss ತ್ರಾಸೇ ಇಲ್ಲೆ.. ಅದ್ಕ ಪ್ರೀತಿ ಹೇಳಿ ಒಂದು ತೊವೆ, ದಡ್ಲಿ ಕಾಯ್ ಉಪ್ಪಿನಕಾಯಿ, ಖಾರ ಮೆಣಸಿನ್ ಕರೆ ಸಂಡ್ಗೆ ಮಾಡಿದ್ರಾಗೋತು.. ಅಲ್ದನೆ ನಿವೇದಿತಾ???!!!"
ನಾನು: "ಸವಿತಕ್ಕಾ.. ಹೌದು.. ಅದ್ರೆ ಗಂಡಿನ ಬದಿಯೌಕೆ ತ್ರಾಸಿಲ್ಲೆ. ನಿಂಗಕಿಗೆ ತ್ರಾಸೆಯಲೆ?? ಹಿ ಹಿ ಹಿ.. ಶ್ವೇತಕ್ಕನ ಅಪ್ಪನ ಮನೆಯಲ್ಲಿ ಚೊಲೊ ಊಟಾನೇ ಮಾಡಿದಿದ್ವಲೆ??"

------------------------------------------------------------------------------------------
ದೃಶ್ಯ:
ಗಂಗಾ ಸಮಾರಧನೆಯ ಮುನ್ನೆಣೆ (ಹಿಂದಿನ) ದಿನದ ರಾತ್ರಿ. ಊಟ ಮುಗಿಸಿಕ್ಯಂಡು ಮನಕ್ಯಮಲೆ ಹೇಳಿ ಎಲ್ಲವೂ ಮೆತ್ತಿಗೆ ಹತ್ತಿ ಹಾಶಿಗೆ ಮೇಲೆ ಕುಂತ್ಗಂಡು ಸುದ್ದಿ ಹೊಡಿತಾ ಇದ್ದ( ನಾನು, ಅಮ್ಮ, ನನ್ನ ಇಬ್ರೂ ಮಾವ, ಅತ್ತೆ, ತಮ್ಮಂದಿಕ್ಕ, ನನ್ನ ಕಾಕ, ಸವಿತಕ್ಕಾ, ಅಜ್ಜ, ಆಯಿ, ಮತ್ತೆ ಅಮ್ಮನ ಅತ್ತೆ- ನನ್ನ ಅಜ್ಜಿ.)

ಸಂಭಾಷಣೆ:
ಜೊತತ್ತೆ( ನನ್ನ ಸಣ್ಣತ್ತೆ):
" ಅಲ್ದೇ.. ಶೈಲತ್ಗೆ.. ಔರಂಗಾಬಾದನಲ್ಲಿ ಚರ್ಮದ bagಎಲ್ಲ ರಾಶಿ ಚೊಲೋ ಸಿಗ್ತು ಹೇಲಿದಿದ್ಯಲೆ.. ಸುಳ್ಳ ಸುಳ್ಲ ಹೇಳಿದ್ಯಲೇ.. ಅಲ್ಲೀಗೇಯಾ ಬ್ಯಾರೆ ಬದಿಯಿಂದಾವ ತ್ರಸ್ವಡಾ.."
ನನ್ನ ಅಮ್ಮ: ಇಶ್ ಶಿಶ್ರೋss.. ಯಾನು ಸುಳ್ಳೇ ನಿನ್ನ ಮಳ್ ಮಾಡವು ಹೇಳಿ ಹೇಳಿದ್ರೆ. ನೀನು ಖರೆ ಹೇಳಿ ನಂಬ್ಕ್ಯ ಬುಟ್ಯಲೇ ಮಳ್ಳುsss...( ಜೋರಾಗಿ ನಗು)
ಸವಿತಕ್ಕಾ:"ಜ್ಯೋತಿ.. ಸುಳ್ಳೇಯಾ ಹsssss!! ಇದ್ಕೂ ಸಮಾ ಯಂತೂ ಗೊತ್ತಿಲ್ಲೆ.. ನಿಂಗೆ ಈಗ ಸುಳ್ಳೇಯಾ ಹೇಳಿ ಹೇಳ್ತು.."
(ನನ್ನ ಅಮ್ಮ ಬಿದ್ದು ಬಿದ್ದು ನಗ್ತಾ ಇದ್ದು)
ಜೋತತ್ತೆ: " ಹೌದೇ ಸವಿತತ್ಗೆ.. ಯಾನೂವಾ ಹೌದು ಹೇಳಿ ನಂಬಿಕ್ಯಂಡು.. ಆ ಅಂಗಡಿಯವನ ಹತ್ರ ಹೋಗಿ.. ’ಇಲ್ಲಿ ಚರ್ಮದ ಸಾಮಾನು ಚೊಲೋ ಸಿಗ್ತದ್ಯ??’ ಹೇಳಿ ಕೇಳದ್ರೆ ಅಂವಾ ’ಇಲ್ಲ ಮೇಡಂ.. ಇಲ್ಲಿಗೇ ಬೇರೆ ಕಡೆಯಿಂದಾ ತರಿಸ್ತೇವೆ’ ಹೇಳಿ ನ್ಯಗಾಡ್ತಾ.."
(ನನ್ನ ಅಮ್ಮ ಬಿದ್ದು ಬಿದ್ದು ನಗ್ತಾ ಇದ್ದು)
ಅಜ್ಜಿ(ನನ್ನ ಅಮ್ಮನ ಅತ್ತೆ) : "ಅಲ್ದೆ ಜೋತಿ.. ಅಲ್ಲೂವಾ ಕನ್ನಡಾನೇ ಮಾತಾಡ್ತ್ವನೇ??"
(ಎಲ್ಲರೂ ಬಿದ್ದು ಬಿದ್ದು ನ್ಯಗಡ್ದ)

------------------------------------------------------------------------------------------
ದೃಶ್ಯ:
ಮೇಲಿನದೇ ದೃಶ್ಯ.
ಸಂಭಾಷಣೆ:
ಆಯಿ : "ನಿವೇದಿತಾ.. ಶಣಾ.. ಅಲ್ಲೇ ಆಫೀಸ್ ನಲ್ಲೇ ಯಾರನ್ನಾದ್ರೂ ನೋಡಕ್ಯಂಜ್ಯನೇ??"
ನಾನು: "ಆಯಿ.. ಯನ್ನ officeನಲ್ಲಿ ಇರವೆಲ್ಲಾ ತಮಿಳ್ರು, ತೆಲಗ್ರೇಯಾ.. ಯಾರನ್ನೂ ನೋಡಿಕ್ಯಂಜ್ನಿಲ್ಲೆ"
ಆಯಿ:"ಅಲಾ.. ಹಂಗೇನಾದ್ರೂ ನೋಡಿಕ್ಯಳದಿದ್ರೆ ನೋಡ್ಕ್ಯ.. ಯಂಗಕಿಗೇನು ಬ್ಯಾಜಾರಿಲ್ಲೆ"
ನಾನು: "ಆಯಿ.. ಅಡ್ಡಿಲ್ಲೆ".
ಅಜ್ಜಿ(ನನ್ನ ಅಮ್ಮನ ಅತ್ತೆ): "ನಿವೇದಿತಾ.. ಹಂಗೇಯಾ.. ಗೋತ್ರಾನೂ ನೋಡಿಕ್ಯಂಡು ನಿನಗೆ ಬೇಕಾದವ್ರನ್ನಾ ಹುಡ್ಕ್ಯಬುಡು.. ಗೊತ್ತಾತ??"
ನಾನು:" :) .. ಅಡ್ಡಿಲ್ಲಿ ಗೋತ್ರಾ ಕೇಳಕ್ಯಂಡೇಯಾ.. Love ಮಾಡ್ತಿ.. ಯಾರದ್ರು ಸಿಕ್ಕಿದ್ರೆ.."