ತವಕ


ಸಣ್ಣದೊಂದು ಚಿಗುರು,
ಬೆಳೆದು ಮರವಾಗುವ ಆಸೆ,
ಹಣ್ಣು ಹೂವಾಗುವ ಕನಸು,
ನಿದ್ದೆಯಲ್ಲೂ ಬೆಳಕಿನ ಕನವರಿಕೆ,
ನಿಲ್ಲುವುದಕ್ಕೂ ಸಮಯವಿಲ್ಲ,
ಉಸಿರು ಉಸಿರಿಗೂ ಎಣಿಕೆ ಚಕ್ರ.
ಕೂಡಿ-ಕಳೆದು-ಗುಣಿಸಬೇಕು,
ಬೆಳೆಯಬೇಕು ಬೆಳೆಯಬೇಕು...
ಸಂಜೆಗೊಮ್ಮೆ ನಿಟ್ಟುಸಿರು
ನಾಳೆಯ ಕಾಯುವುದೇ ಕಾಯಕ.
ಬೇಸರಕ್ಕೆ ಇಂದು ಸಮಯವಿಲ್ಲ,
ಮುಂದೆ ನೋಡಿದರಾಯಿತು..
ಒಂಟಿ ನಡೆದಷ್ಟೂ ಸೋಲುವ ಭಯ.

ಕತ್ತಲೆಗೆ ಹೆದರಿ ನಡೆಯುವುದ ನಿಲ್ಲಿಸಬೇಕೆ?
ಆಕಾಶಕ್ಕೆ ನಕ್ಷತ್ರಗಳು ಕಡಿಮೆಯೇ?
ರಾತ್ರಿ ನಿದ್ದೆಯಲ್ಲಿ ಕಳೆದರೆ ನಕ್ಷತ್ರವಾಗುವುದು ಹೇಗೆ??!!
ಕಣ್ಣ ಕಂಬನಿಯನ್ನೇ ನುಂಗಬೇಕು,
ನೆನ್ನೆಗಳ ನೋವನ್ನ ಮರೆಯಬೇಕು,
ಬೆಳೆಯಬೇಕು ಬೆಳೆಯಬೇಕು.
ಬೆಳೆಯಬೇಕು ಬೆಳೆಯಬೇಕು.

ನೀನಿಲ್ಲದ ಊರಲ್ಲಿ



DreamBoy,
ನಿನ್ನ ಹೆಸರು ಎಷ್ಟು ಚನ್ನಾಗಿದೆ ಗೊತ್ತಾ.. ಅದಕ್ಕೆ 'Dear','Sweetheart','honey' ಅಂತಾ ಏನೂ prefix ಬೇಕು ಅನ್ನಿಸಲ್ಲ ನಂಗೆ. Anyways ನೀನಿಲ್ಲದ ಊರಿಗೆ ಬಂದಿದೀನಿ, ನಿನ್ನ ಜೊತೆ ಕಳೆದ ಎಲ್ಲ ನೆನಪುಗಳ ಜೊತೆಯಲ್ಲಿ... ತುಂಬಾ ಸಲ ನೀನು ಇಲ್ಲೆ ಇದೀಯಾ ಅನ್ನಿಸುತ್ತೆ, ಅದೇನೋ ಹೇಳಲಿಕ್ಕೆ ಅಂತಾ ತಿರುಗ್ತೀನಿ.. ಆಮೇಲೆ ನೆನಪಾಗುತ್ತೆ, ನೀನಿಲ್ಲಿ ಇಲ್ಲ ಅಂತಾ.. ನಿನ್ನ ಜೊತೆ ನಕ್ಕು ಅಭ್ಯಾಸ ಆಗಿಬಿಟ್ಟಿದೆ ಕಣೊ.. ಅದೆಷ್ಟು ಬೇಗ ಕಳೆದು ಹೋಯ್ತು 2 ತಿಂಗಳು ಭುಬನೇಸ್ವರದಲ್ಲಿ.. ನಿನ್ನ ಜೊತೆ ಸಮಯ ಹೋಗಿದ್ದೇ ಗೊತ್ತಗಲಿಲ್ಲ.. ಇಲ್ಲಿ harry, kavi ಎಲ್ಲ ನಿನ್ನ ಬಗ್ಗೆ ಮಾತಾಡಿದಾಗಲೆಲ್ಲ ನೀನು ತುಂಬಾ ಅಂದ್ರೆ ತುಂಬಾ ನೆನಪಾಗ್ತೀಯಾ ಕಣೊ.. ತುಂಬಾ ನೆನಪಾಗ್ತೀಯಾ.. ಒಂಟಿ ಕೂತಾಗೆಲ್ಲ ಹಿಂದಿನದೆಲ್ಲವನ್ನ ನೆನೆಸ್ತೀನಿ... ಪ್ರತೀ ಸಲ ನೆನೆಸಿದಾಗ್ಲೂ ಅದೇ ರೋಮಾಂಚನ, ನಿನ್ನ ಕಿರುನಗೆ ನನಗೆ ಯಾವಾಗಲೂ ಕೊಡತ್ತಲ್ಲಾ ಅಂಥದ್ದೆ.
ಮೊದಲ ಸಲ ನಿನ್ನ ನೋಡಿದಾಗ ನನ್ನ friends ಹತ್ರ ಹೇಳಿದ್ದೆ, "he is so cute, look at his smile,its soo pure"ಅಂತಾ. ನನಗೆಲ್ಲಿ ಗೊತ್ತಿತ್ತು ನಾವಿಬ್ರೂ ಒಟ್ಟಿಗೆ ಕೆಲಸ ಮಾಡಬೇಕಾಗುತ್ತೆ ಅಂತಾ!!ನನಗೆ ಹೇಳಿಕೋಳ್ಳೋಂಥ ಖುಷಿಯಾಗ್ಲಿ, excitment ಆಗ್ಲಿ ಇರಲಿಲ್ಲ, ನನಗೂ ನಿನಗೋ ಅಷ್ಟು ಪರಿಚಯ ಇರಲಿಲ್ಲವಲ್ಲ..and you know that I m not a kind of girl who 'wow's guys, or falls easily for guys, ಆದ್ರೂ ನೀನು ಪ್ರತೀ ಸಲ ನಕ್ಕಾಗಲೂ ಅದೇನೋ, ನನ್ನೆಲ್ಲ tension, stress ಎಲ್ಲ 2 ಸೆಕೆಂಡ್ ಮರೆತುಬಿಡತಿದ್ದೆ. Events finalise ಮಾಡೋದು, judges, budget, arrangments ಅಂತಾ ಕೆಲಸದಲ್ಲಿ ನಾವಿಬ್ರೂ ತುಂಬಾ ಸಮಯವನ್ನ ಒಟ್ಟಿಗೆ ಕಳೆದ್ವಿ, ಆದ್ರೂ ನಾವಿಬ್ರು ಸುಮ್ ಸುಮ್ನೆ timepass ಮಾಡಿದ್ದು ಕಡಿಮೇನೇ. ಅಲ್ವಾ? college fest timeನಲ್ಲಿ ನನಗೂ ಮತ್ತೆ ಅದ್ಯಾರಿಗೋ ಜೋರಾಗಿ ಜಗಳ ಆಗಿತ್ತು ನೆನಪಿದ್ಯಾ? ಆಗ ನೀನು ನನ್ನ ಹತ್ರ ಹೇಳಿದ್ದೆ "Nivi, Dont worry, ನಿಂದೇನೂ ತಪ್ಪಿರಲಿಲ್ಲ", and then you had given me the same smile.. that meant to me so much.. ಗೊತ್ತಾ? and then i used to ask you smile everytime HOD scolded me, everytime things werent right.. or just everytime I felt low. Till today.. ಇವತ್ತಿನ ತನಕಾ ಕೂಡ ನಿನ್ನ ಆ smile ನೆನಸ್ತೀನಿ.
College fest was over, but that wasnt the end.. ಮೊದಮೊದಲು ಬರೀ fwd msg, ಆನಂತರ ನಿಧಾನವಾಗಿ chatting, ಆಮೇಲೆ calls, and then late night calls.. ನಿನ್ನ ನೆನೆಸಿಕೊಂಡಾಗಲೆಲ್ಲ ನೆನಪಾಗೋದು Rex cafe.. ಹಿ ಹಿ ಹಿ.. :-) ನೆನಪಿದ್ಯಾ?
ನಿನ್ನ ಜೊತೆ ನಿನ್ನ bike ಮೇಲೆ ಬರೋದಕ್ಕೆ ನನಗೇನೂ ನಾಚಿಕೆಯಾಗ್ಲಿ, ಅಥವಾ so called "ಆ ಥರದ ಭಾವನೆ"ಯಾಗ್ಲಿ ಇರಲಿಲ್ಲ.. ಯಾಕಂದ್ರೆ we never felt it something strange, I always felt that you wer my very good friend, and ನೀನೂ ಕೂಡ.. it was all so casual, and normal.. rite? ಹಾಗಾಗಿ ನೀನು call ಮಾಡಿ "Nivi, shall I pick you up?" ಅಂತಾ ಕೇಳಿದಾಗ ok ಅಂತಾ ಹೇಳಿಬಿಟ್ಟೆ. and then.. it had to happen!! bridge ದಾಟೋಷ್ಟರಲ್ಲಿ ಜೋರಾಗಿ ಮಳೆ ಶುರುಆಯ್ತು. ನೆನಪಿದ್ಯಾ.. ನಾವು ಸುಮಾರು ಹೊತ್ತು railway station ಹತ್ರ ಇರೋ ಆ ಅಂಗಡಿ ಹತ್ರ ನಿಂತಿದ್ವಿ?? ನಾನು ಛಳಿಯಲ್ಲಿ ನಡಗೋದನ್ನ ನೋಡಿ ನೀನು ನಿನ್ನ jacket ತೆಗೆದು ಕೊಟ್ಟೆ, ಥೇಟ್ moviesನಲ್ಲಿ ಆಗುತ್ತಲ್ಲ ಅದೇ ಥರಾ!! I was like, how can I take?? ಅಲ್ವಾ? ನಾನು ಬೇಡ ಅಂದಿದ್ದೆ.. 3ನೇ ಸಲ ನೀನು ಕೇಳಿದಾಗಲೂ ನಾನು ಬೇಡ ಅಂದಾಗ ನೀನೇ ಹೊದೆಸಿದ್ದೆ.. again movies ನಲ್ಲಿ ಆಗೋ ಥರಾ.. that was the 1st time a guy did something like that to me.. I was confused.. because this always happens only in movies, or novels or in my dreams.. but, but never it was supposed to happen with me in MY REAL life.. I was confused.. but you were normal and as casual as you always used to be.. ಹಾಗಾಗಿ ನಾನು ತುಂಬಾ ತಲೆಕೆಡಿಸಿಕೊಳ್ಳೋದಕ್ಕೆ ಹೋಗ್ಲಿಲ್ಲ.. ನನ್ನ friends ಮಾತ್ರಾ ಇದನ್ನ ಕೇಳಿ, " nivi, so romantic!!" ಅಂದಿದ್ರು..
ಆಮೇಲೆ ನಾವು Rex cafeಗೆ ಹೋಗಿದ್ವಿ, ಅಲ್ಲಿ ಆಡಿದ ಮಾತು ಇನ್ನೂ ನೆನ್ನೆ ತಾನೆ ಆಡಿದೀವೇನೋ ಅನ್ನೋಥರಾ ನೆನಪಿದೆ.. ನಾನು ನನ್ನ recent poem ಒಂದನ್ನ ಹೇಳಿದ್ದೆ, ನೀನು ಸ್ವಲ್ಪಾನೂ ಸರಿಯದೇ ಕೇಳಿದ್ದೆ. ಆನಂತರ ಆ ಮಳೆ ನಿಂತ ವಾತಾವರಣದಲ್ಲಿ ramdev ತನಕ walk ಹೋಗಿದ್ವಿ.. ನೆನಪಿದೆಯಲ್ಲ? ನಿನ್ನ jacketನ ಪರಿಮಳ ನನಗಿನ್ನೂ ನೆನಪಿದೆ ಕಣೋ.. ಆ walkನಲ್ಲಿ ಅದೆನೇನು ಮಾತಾಡಿದ್ವೋ.. ನಮ್ಮ ಹುಚ್ಚುಚ್ಚು ನಂಬಿಕೆಗಳು, ಅನಿಸಿಕೆಗಳು, ಕನಸುಗಳು.. ನಿನಗೆಲ್ಲ ನೆನಪಿದೆಯಲ್ಲ?? ಈಗ ನೆನೆಸ್ತಾ ಹೋದ್ರೆ ಎಷ್ಟೋಂದು ನೆನಪುಗಳು.. ಯಾವುದನ್ನ ಬಿಡಬೇಕು, ಯಾವುದನ್ನ ಮರೀಬೇಕು ಗೊತ್ತಾಗಲ್ಲ...ತುಂಬಾ ದಿನಗಳ ನಂತರ ನಿನಗಾಗಿ 4 ಸಾಲುಗಳನ್ನ ಬರದಿದ್ದೀನಿ.. ಕೇಳತೀಯಾ?
ಜುಮು ಜುಮು ಮಳೆ,
ನೀನು,
ನನಗಾಗಿ ನೀ ಬರೆದ ಕವನ.
ಮುಸ್ಸಂಜೆ ಸಾಗರದ ಮಂದ ಅಲೆ,
ಬಾನು,
ಜೊತೆಯಲ್ಲಿ ಕೈ ಹಿಡಿದು ನಡೆವ ಕ್ಷಣ


ಇಷ್ಟ ಆಯ್ತೇನೋ?
ತುಂಬಾ ನೆನಪಾಗ್ತೀಯಾ ಕಣೋ.. ನನಗೀ ಊರನ್ನ ಇಷ್ಟ ಪಡಬೇಕು ಅಂತಾ ಅನ್ನಿಸ್ತಿಲ್ಲಾ ಕಣೋ, ನಾವು ನಡೆದಾಡಿದ ರಸ್ತೆಗಳು ಈ ಊರಲ್ಲಿ ಇಲ್ಲವಲ್ಲ.. btw chinmay ಸಿಕ್ಕಿದ್ದ.. ಸ್ವಲ್ಪ ದಪ್ಪ ಆಗಿದಾನೆ..ಆದ್ರೂ ಚನ್ನಾಗಿ ಕಾಣಿಸ್ತಾನೆ. ok baba.. ನಿನ್ನಷ್ಟು ಚನ್ನಾಗಿ ಕಾಣಲ್ಲ.. You are the most handsome guy i have ever seen.. ನಿನ್ನ ಎದುರಿಗೆ Brad Pitt ಕೂಡಾ waste.. ಸರಿನಾ?happy?? ಹಾ... ಮೊನ್ನೆ ಸಂದೀಪ ಸಿಕ್ಕಿದ್ದ.. he said something that I really liked it.. so thot of sharing it with u.. I know you ll also like it. It was one of the phrases worth collecting.. it goes something like this..
"I like people like you, who make people like me like people like you, like you." ಚನ್ನಾಗಿದೆ ಅಲ್ಲ?last 'like you' redundant ಅನ್ನಿಸುತ್ತೆ..but it is not.. ಅರ್ಥ ಆಯ್ತೇನೋ? ತಲೆ ಯಾಕೆ ಅಲ್ಲಡಿಸ್ತೀಯಾ? ಅರ್ಥ ಆಗಿಲ್ವಾ? uff!! I somehow knew it.. waste ಇದೀಯಾ.. ಅರ್ಥ ಆದ್ರೆ ಒಳ್ಳೆದಾಯ್ತು.. ಇಲ್ಲ ಅಂದ್ರೂ ಅರ್ಥ ಮಾಡ್ಕೋ.. ಸರಿನಾ??
ಮತ್ತೆ ಸಿಗ್ತೀನಿ... ತುಂಬಾ ನೆನಪಾಗ್ತೀಯಾ...
Take care. ಅಲ್ಲಿ local trains ನಲ್ಲಿ ಕಳೆದುಹೋಗಿ ಬಿಡಬೇಡ..processing timeನ ಸ್ವಲ್ಪ ಜಾಸ್ತಿ ಮಾಡ್ಕೋ(he he he.. i m sorry for this) ಸರಿ bye.