ಸಣ್ಣ ಮುನಿಸು ನಿನ್ನ ಮೇಲೆ..


ನಿನ್ನ ಅಪೂರ್ಣ ಕವಿತೆಯಾಗುವ ಮನಸ್ಸು.
ನೆನೆದಾಗಲೆಲ್ಲ ಹೊಸದೊಂದು ಸಾಲು


ಮುಂಜಾವಿಗೆ ಸುಳಿವ ತಂಪು ಗಾಳಿ
ಮುದುಡಿ ಮಲಗುವ ಆಸೆ
ಬದಿಗೆ ನೀನಿಲ್ಲ.
ಸಣ್ಣ ಮುನಿಸು ನಿನ್ನ ಮೇಲೆ..
ನೀನಿದ್ದಿದ್ದರೆ!!!


ಬಸ್ಸು, ಆಫೀಸು, ಕ್ಯಾಂಟೀನು..
ತಪ್ಪಿ ನಿನ್ನ ಕಂಡಂತೆ ಭಾಸ
ಕಣ್ಣಿನಾಟಕ್ಕೆ ನೀನಿಲ್ಲ..
ಸಣ್ಣ ಮುನಿಸು ನಿನ್ನ ಮೇಲೆ..
ನೀನಿದ್ದಿದ್ದರೆ!!!


ಮುಗಿಲು ಕಪ್ಪಾಗುವುದು ದಿನ
ಧುಸ್ಸೆಂದು ದಣಿದಾಗ ಮನೆಗೆ ಸೇರುವ ತವಕ
ತೆರೆವ ಬಾಗಿಲಲ್ಲಿ ನೀನಿಲ್ಲ
ಸಣ್ಣ ಮುನಿಸು ನಿನ್ನ ಮೇಲೆ...
ನೀನಿದ್ದಿದ್ದರೆ!!!


ಪ್ರೀತಿಯಲ್ಲಿ ಸಾವಿರ ಜನ
ಜೊತೆಯಲ್ಲಿ ನಡೆದಾಡುವರು..
ರಸ್ತೆ, ಗಾಡಿ, ಹಳ್ಳ..
ಅರಿವೇ ಇಲ್ಲದಂತೆ.
ಸಣ್ಣ ಮುನಿಸು ನಿನ್ನ ಮೇಲೆ..
ಇರಬಾರದೆ ನೀನು ನನ್ನ ಜೊತೆ??