ತವಕ


ಸಣ್ಣದೊಂದು ಚಿಗುರು,
ಬೆಳೆದು ಮರವಾಗುವ ಆಸೆ,
ಹಣ್ಣು ಹೂವಾಗುವ ಕನಸು,
ನಿದ್ದೆಯಲ್ಲೂ ಬೆಳಕಿನ ಕನವರಿಕೆ,
ನಿಲ್ಲುವುದಕ್ಕೂ ಸಮಯವಿಲ್ಲ,
ಉಸಿರು ಉಸಿರಿಗೂ ಎಣಿಕೆ ಚಕ್ರ.
ಕೂಡಿ-ಕಳೆದು-ಗುಣಿಸಬೇಕು,
ಬೆಳೆಯಬೇಕು ಬೆಳೆಯಬೇಕು...
ಸಂಜೆಗೊಮ್ಮೆ ನಿಟ್ಟುಸಿರು
ನಾಳೆಯ ಕಾಯುವುದೇ ಕಾಯಕ.
ಬೇಸರಕ್ಕೆ ಇಂದು ಸಮಯವಿಲ್ಲ,
ಮುಂದೆ ನೋಡಿದರಾಯಿತು..
ಒಂಟಿ ನಡೆದಷ್ಟೂ ಸೋಲುವ ಭಯ.

ಕತ್ತಲೆಗೆ ಹೆದರಿ ನಡೆಯುವುದ ನಿಲ್ಲಿಸಬೇಕೆ?
ಆಕಾಶಕ್ಕೆ ನಕ್ಷತ್ರಗಳು ಕಡಿಮೆಯೇ?
ರಾತ್ರಿ ನಿದ್ದೆಯಲ್ಲಿ ಕಳೆದರೆ ನಕ್ಷತ್ರವಾಗುವುದು ಹೇಗೆ??!!
ಕಣ್ಣ ಕಂಬನಿಯನ್ನೇ ನುಂಗಬೇಕು,
ನೆನ್ನೆಗಳ ನೋವನ್ನ ಮರೆಯಬೇಕು,
ಬೆಳೆಯಬೇಕು ಬೆಳೆಯಬೇಕು.
ಬೆಳೆಯಬೇಕು ಬೆಳೆಯಬೇಕು.

7 comments:

ಬಾನಾಡಿ said...

ಕವನ ತುಂಬಾ ತವಕ ತುಂಬಿದೆ.
ಒಲವಿನಿಂದ
ಬಾನಾಡಿ

Rajesha said...

nimma "TAVAKA" chennagittu. nimma kavanadalli tavaka, hambala, kaatara, aase, bayake, naalina bagegina chinte yellavu ittu.
padagucchagalu tumba chennagiddavu. neevu englishnalli estu chennagi baritheero, kannadadallu ashte chennagi baritheera..
Saahityakke nimma seve heege salluttirali....

Rajesh
Mangalore, Abu Dhabi

Jagali bhaagavata said...

ಒಂಟಿ ನಡೆದಷ್ಟೂ ಸೋಲುವ ಭಯ...
...hmm. hmm. matte taDa yaake? jODi hudkollodappa:-)

Niveditha said...

@ ಬಾನಾಡಿ
ಧನ್ಯವಾದಗಳು.

@rajesh
Well.. thanks.ನೀವು ಹೀಗೆ ಓದಿ ಪ್ರತಿಕ್ರಿಯಿಸ್ತಾ ಇದ್ರೆ ಇನ್ನೂ ಉತ್ಸಾಹ ಇರುತ್ತೆ.. thanks for peeping into my DreamBox.

@Jagali Bhagavata
ಹ್ಮ್... ನೋಡೋಣ.

ಶ್ರೀನಿಧಿ.ಡಿ.ಎಸ್ said...

lovely!

Sandeepa said...

ಚೆನ್ನಾಗಿದೆ. ಆದರೆ "ಹಣ್ಣು ಹೂವಾಗುವ ಕನಸು" ಅರ್ಥವಾಗಿಲ್ಲ...

Anonymous said...

Well Niv.....Very complex for understanding ...when compared with your other poems linking here is lagging a bit.......but i liked the line " hannu hoovaguva kanasu "...very beautiful imagination.