ಹಳೆಯ dairy ಒಂದು ಮೊನ್ನೆ ಮನೆ cleanಮಾಡುವಾಗ ಸಿಕ್ಕಿತು. ಹಿಂದಿನದೆಲ್ಲ ಒಂದೊಂದಾಗಿ ಒಂದೋ ಮನಸ್ಸಾಯಿತು.
ತುಂಬಾ ವರ್ಷವೇನಾಗಿಲ್ಲ ಅದನ್ನೆಲ್ಲ ಬರೆದು. ಒಂದು 5-6 ವರ್ಷವಾಗಿರಬಹುದು. ಆದ್ರೂ ಯಾವುದೋ ಜನ್ಮದಲ್ಲಿ ಬರೆದಂತೆ ಅನ್ನಿಸ್ತಿತ್ತು.ಎಷ್ಟು ಬದಲಾಗಿಬಿಟ್ಟಿದೀನಿ ನಾನು. ಆ dairyಯಲ್ಲಿ ಬರೆದ ಸನ್ನಿವೇಶಗಳಲ್ಲಿ ಇದ್ದಿದ್ದು ನಾನೇನಾ ಅನ್ನಿಸುವಷ್ಟು ದ್ವಂದ್ವ..
April 28 2010:
Hey Dairy,
ಇವತ್ತು ನಾನೊಬ್ಬನನ್ನ ಭೇಟಿಯಾದೆ.Well.. ಅವನಲ್ಲಿ ಅಷ್ಟೇನೂ speciality ಇಲ್ಲ.. ಆದ್ರೆ ಅವನ ಹೆಸರು ಮಾತ್ರ ತುಂಬಾ ಚನ್ನಾಗಿದೆ. ತುಂಬಾ ನಾಚಿಗೆ ಸ್ವಭಾವದವನು. ತುಂಬಾ ಕಡಿಮೆ ಮಾತಾಡ್ತಾನೆ. ನಾನು ಹೊಸೊಬ್ಬಳು ಅಂತಾ ಆಗಿರಬಹುದು...
ನಂತರದ ದಿನಗಳು ನನ್ನ ಕಣ್ ಮುಂದೆ ಹಾಸಿಹೋದವು.. you know flashbackಥರಾ..
ಅವನು ನನ್ನ propose ಮಾಡಿದ್ದು, ನಾನು reject ಮಾಡಿದ್ದು.. ಮತ್ತೆ ಅವನು ನನ್ನ ಮದುವೆಗೆ propose
ಮಾಡಿದ್ದು.. ನನ್ನ ಗೊಂದಲ.. ಅದೇ ಸಮಯಕ್ಕೆ ನಮ್ಮಿಬ್ಬರನ್ನು client siteಗೆ ಕಳಿಸಿದ್ದು..
ಉಫ್!!! ಅವನ ಶರೀರದ ಕಂಪು ನನಗಿನ್ನೂ ನೆನಪಿದ್ದಿದ್ದಿ ನನಗೇ ಆಶ್ಚರ್ಯ.. ಇಷ್ಟು ವರ್ಷಗಳ ನಂತರವೂ ನನಗೆ ಆ ರಾತ್ರಿಯ ನೆನಪು ಎಷ್ಟು ಚನ್ನಾಗಿದೆ..
ಸಂಜೆ client officeನಿಂದ ನಾವಿಬ್ಬರೂ ಬೀಚ್ ಗೆ ಹೋಗಿದ್ವಿ.ತಂಪು ಗಾಳಿ, ಅಲೆಗಳು, ರಾತ್ರಿರಾಣಿಯ ಪರಿಮಳ ಗಾಳಿಯ ಉಪ್ಪನ್ನೂ ಮೀರಿಸುವಂತಿತ್ತು.. ಯಾವಾಗ ನಾವಿಬ್ಬರು ಬೆರಳೊಡನೆ ಬೆರಳ ಬೆರೆಸಿದೆವೋ ಗೊತ್ತೇ ಆಗಲಿಲ್ಲ.. ನಮ್ಮಿಬ್ಬರ ನೆರಳು ಸಂಜೆಯ ಕೆಂಪು ಹರಡಿದ ಮರಳಿಗೆ ಚಿತ್ರ ಬಿಡಿಸಿದಂತೆ ಹರಡಿತ್ತು.ಮೊದಲು ಅಂಗೈಯಷ್ಟೆ ಬೆಸೆದಿತ್ತು, ನೋಡ ನೋಡುತ್ತಿದ್ದಂತೇ ಅವನ ಕೈಯ್ಯ ತುಂಬಾ ನನ್ನ ಕೈ.. ಮರದ ಕೊಂಬೆಗೆ ಬಳ್ಳಿ ಹರಡಿದಂತೆ.. ಅವನೆದೆಗೊರಗಿಕೊಂಡೆ. ಅವನೇ ದೂರ ಸರಿದಿದ್ದ. ನಾನು realityಗೆ ಬಂದಿದ್ದೆ. ಒಂದು ಥರದ embarassment ನನ್ನ ಕಾಡಿಸಲಿಕ್ಕೆಶುರು ಮಾಡಿತ್ತು.
ವಾಪಸ್ hotelಗೆ ಬಂದಿದ್ವಿ. ನನ್ನ roomನ lock open ಆಗ್ತಾ ಇರಲಿಲ್ಲ. ಅವನಿಗೆ callಮಾಡಿ ಕರೆದಿದ್ದೆ. ಅವನು ಬಂದು ನನ್ನ room lock ತೆಗೆದಾಗ ನನ್ನ ಮನಸಲ್ಲಿ ಏನೋ ಗೊಂದಲ. I invited him inside. ಕಿಟಕಿ ತೆರೆದಿತ್ತು.. ತಂಪು ಗಾಳಿ.. ಯಾಕೋ ನಮ್ಮಿಬ್ಬರ ನಡುವಿನ ಮೌನ ಮುರಿಯುವಂತೆ ಕಾಣಲಿಲ್ಲ.. TV on ಮಾಡಿದೆ. ಗಾಳಿಗೆ ನನ್ನ ಕೂದಲೆಳೆಗಳು ಹಾರಾಡುತ್ತಿದ್ದವು.. ಅದೇನಾಯಿತೋ ಏನೋ.. ನಾನು ಅವನೆದೆಗೆ ಮತ್ತೆ ಒರಗಿಕೊಂಡೆ. ಅವನು ದೂರ ಸರಿಯಲ್ಲಿಲ್ಲ.. ನನ್ನ ಹಣೆಗೆ ಮೆತ್ತನೆಯ ಮುತ್ತು ಕೊಟ್ಟ.. ಕಣ್ಣೆತ್ತಿ ಅವನ ನೋಡಿದೆ.. ಅವನು ಕಣ್ಣ ಸರಿಸಿಕೊಡ. ನಾನು ಅವನೆದೆಗೆ ಮುತ್ತು ಕೊಟ್ಟಿದ್ದೆ... ನನ್ನೆದೆಯ ಗೊಂದಲಗಳೆಲ್ಲ ಆ ಕ್ಷಣಕ್ಕೆ ಮಾಯ. ಬೆಳಗಿನವರೆಗೂ ಅವನೆದೆಗೆ ಒರಗಿ ಮಲಗಿದ್ದೆ. ನಾನೇಳುವಾಗ ಅವನು ನನ್ನ ಕೂದಲುಗಳನ್ನ ನೇವರಿಸುತ್ತಾ..
"Good morning" ಅಂದಿದ್ದ.
ನಾನು ನಕ್ಕು. "very good morning" ಅಂದಿದ್ದೆ..
ಹ್ಮ್.. 5 ವರ್ಷಗಳಾಯ್ತು.. ನಮಗೀಗ ಒಂದು ಹೆಣ್ಣು ಮಗು..
Well.. ಜೀವನದ ಪ್ರತಿ ದಿನಗಳಲ್ಲೆಲ್ಲೋ ನಾವಿಬ್ಬರೂ ಕಳೆದು ಹೋಗಿದ್ವಿ.. ಈ dairyಗೆ Thanks.. Dairy ಸಿಕ್ಕಂತೆ, ಮತ್ತೆ ನನಗೆ ನಾವಿಬ್ಬರೂ ಸಿಕ್ಕಿದರೆ.. ಗೊತ್ತಿಲ್ಲ.. ಈ gap ಕಡಿಮೆ ಆಗುತ್ತೋ ಇಲ್ಲವೋ.. ಆದ್ರೆ ಪ್ರಯತ್ನ ಮಾಡುವ ಮನಸ್ಸಿದೆ..
"ಎಲ್ಲಿ ಹುಡುಕಲಿ ನಿನ್ನ..
ಜೊತೆಯಲ್ಲೇ ನಡೆಯುತ್ತಿದ್ದೆವೆ,
ಕೈಯಲಿ ಕೈಯ ಹಿಡಿದಿಕೋಂಡಿದ್ದೇವೆ,
ಕಣ್ಣೋಟಗಳು ಬೇರೆ ಬೇರೆ ದಿಕ್ಕು.
ನಡುವೆಲ್ಲೋ ಕವಿದಿದೆ ಮುಸುಕು..
ಎಲ್ಲಿ ಹುಡುಕಲಿ ನಿನ್ನ??
ಜೊತೆಯಲೇ ಕಳೆದು ಹೋಗಿದ್ದೇವೆ.."