ನೋಡುತ ನಿಲ್ಲಬೇಕೆನಿಸುವ ಆಕಾಶ,
ಅತ್ತಲ್ಲಿಂದ ಎತ್ತಲೋ ನಡೆಯಬೇಕೆನಿಸುವ ದಾರಿ
ಬ್ರಹ್ಮಾಂಡ ದೂರದ ತಾರೆ,
ಕೈಯೆತ್ತಿ ಸವರಬೇಕೆನಿಸುವ ಮನಸ್ಸು
ಆಹ್!! ಯಾಕಿಷ್ಟು ಅಂತರ??
ಬೆಳದಿಂಗಳಿಗೆ
ಕೇಳಬಯಸುವ ಆ ಕವಿಯ ಕವಿತೆ,
ಶಬ್ದಗಳು ಸ್ಪಷ್ಟವೆನಿಸಿದರೂ
ಅಶ್ಪಷ್ಟ ಸಾಲುಗಳು.
ದಿನ ನಿತ್ಯ ಗುನುಗುನಿಸಿದರೂ
ಆಹ್!! ಯಾಕಿಷ್ಟು ಅಪರಿಚಿತ??
ಹರಿವ ನದಿಯದೊಂದು ದಾರಿ
ಪಯಣಿಗ ನಿನಗೆ, ಅದೆಲ್ಲ ಬೇಕೆ??
ತೃಷೆಯಾದಷ್ಟು ನೀರು ಬೊಗಸೆ
ತುಂಬಾ ತುಂಬಿಸುವ ಬಯಕೆಯಷ್ಟೇ!!!
ಎಲ್ಲ ಮರೆತು ಹೊರಟರೂ
ಆಹ್!! ಯಾಕಿಷ್ಟು ಅಗಾಧ??