ಪ್ರೀತಿಯ ಬಗ್ಗೆ ಜನ ಎಷ್ಟೋಂದು ಥರದ definition, description ಕೊಡ್ತಾರೆ ಅಲ್ವಾ??
"Real, true love is unconditional",
"Love is kind, Love is patient..." etc etc..
ಎಲ್ಲ ಕಾದಂಬರಿಗಳು, movies ಗಳು ಪ್ರೀತಿಗೆ ತಮ್ಮದೆ ಒಂದು ಸ್ವರೂಪ, ಆಕಾರ, image, perception, perspective ಕೊಡುತ್ತೆ ಅಲ್ವಾ??
ಅದೆಲ್ಲವೂ ಸುಳ್ಳಲ್ಲ.. ಹಾಗಂತ ನಿಜವೂ ಅಲ್ಲ.. because,ಅದೆಲ್ಲವೂ ಪ್ರೀತಿಯನ್ನ ಸಂಪೂರ್ಣವಾಗಿ ಆರ್ಥೈಸೋದಿಲ್ಲ. ಅಲ್ವಾ??ಪ್ರೀತಿಯನ್ನ ಅನುಭವಿಸಿಯೇ ಅದರ ಬಗ್ಗೆ ತಿಳಿದುಕೊಳ್ಳಬೇಕು ಅಂತಾರೆ ತುಂಬಾ ಜನ. ನಿಜ. ಅದರ ಅನುಭವವೇ ಪ್ರೀತಿಗೊಂದು ಅರ್ಥ ಕೊಡೋದು. ಅದರ ಅದ್ಭುತತೆಯ ಅರಿವು ಮೂಡೊದು.
ನಾನ್ಯಾಕೆ ಇಷ್ಟೆಲ್ಲ ಯೊಚಿಸ್ತಾ ಇದ್ದೀನಿ ಪ್ರೀತಿಯ ಬಗ್ಗೆ?? Well.. Analysis ಮಾಡೋದು, questions ಕೇಳೋದು ನನ್ನ ಅಭ್ಯಾಸ. ಪ್ರತೀ ಸಲ ಕಾದಂಬರಿಯನ್ನ ಓದುವಾಗ ಅದರಲ್ಲಿನ ಪಾತ್ರ ನಾನಾಗಿ ಬಿಡತೀನಿ. Movies ನಲ್ಲಿ ಆ ಪಾತ್ರಗಳ ಜೊತೆ ನಾನೂ ಅಳತೀನಿ. ಹಾಗೆ ಆದಾಗಲೆಲ್ಲ.. ಅದೇ ಥರದ ಅನುಭವ ನನಗೆ ಆದಾಗ, ನನ್ನ ಅನುಭವದ ಬಗ್ಗೆ analysis ಮಾಡತೀನಿ. I know.. you must be thinking this girl has lost it!!! Well.. ಎನ್ ಮಾಡ್ಲಿ?? I cant help it.. that is my fundamental characteristics.. Anyways.. let me come to the point.
ಪ್ರೀತೆಯ ಬಗೆಗಿನ ಎಲ್ಲ ಭಾವನೆಗಳನ್ನು ಅನುಭವಿಸಬೇಕು ಅನ್ನೊ ಆಸೆ ನಮಗೆಲ್ಲರಿಗೂ ಇದೆ. ಪ್ರೀತಿ ಒಂದು package ಥರ. It comes with so many things attached to it. ಆ ಎಲ್ಲ ಭಾವನೆಗಳನ್ನೂ ಅನುಭವಿಸ ಬೇಕು. To some extent ಅನುಭವಿಸುತ್ತೀವಿ ಕೂಡ. And then suddenly one day.. one moment you feel that ONE feeling you have always wanted to feel. That feeling of COMPLETENESS. ಸಂಪೂರ್ಣತೆ. ಆಹ್!! ಪರಿಪೂರ್ಣತೆ. ತುಂಬಾ ಕೇಳಿರ್ತೀವಿ, ಓದಿರ್ತೀವಿ ಈ ಪರಿಪೂರ್ಣತೆಯ ಬಗ್ಗೆ. ಇದರ ಅನುಭವವಿಲ್ಲದೆ ಪ್ರೀತಿ ಅಪೂರ್ಣ ಅನ್ನಿಸ್ತಿತ್ತುರುತ್ತೆ. ಅವರಿಲ್ಲದೆಯೂ ಅವರಿರುವ ಅನುಭವ!!! ಮೊದಲ ಸಲ!! And that is the moment COMPLETENESS. ಆ ಕ್ಷಣ ಪ್ರೀತಿಯಲ್ಲಿರೋ ಅನುಭೂತಿ. ಅದು ’ಅನುಭವ’ ಅಲ್ಲ. ಅದು ಅನುಭೂತಿ!! ’ಅನುಭವ’ ಮನಸ್ಸಿಗೆ ಆಗೋದು. ಅನುಭೂತಿ ಮನಸ್ಸಿನ limitationsಗಳನ್ನೂ ದಾಟಿ, ಆತ್ಮದ ಪರಿಧಿಯಲ್ಲಿ ನಿಲುಕೋದು. ಅಲ್ವಾ??
ನಮ್ಮ ಮನಸ್ಸೇ ಹಾಗೆ.. ಎಲ್ಲೂ ನಿಲ್ಲೋದಿಲ್ಲ. ದಿನ ದಿನವೂ ಅದಕ್ಕೆ ಹೊಸ ಹೊಸ challenge ಬೇಕು. ಹೊಸ ಹೊಸ boundries,ಪರಿಧಿ, levelsಗೆ ಏರಬೇಕು. ಅದೇ ಅಲ್ವ ಬೆಳವಣಿಗೆ?? ಅದೇ ಅಲ್ವಾ ಮನುಷ್ಯನ ಸ್ವಾಭಾವಿಕ ಗುಣ??
ಜಗತ್ತು ಕೊಡೋ ಸಾವಿರಾರು Definition, descriptions ಗಳ ಜೊತೆಯಲ್ಲೇ ಪ್ರೀತಿಯ ಪ್ರತಿಯೊಂದು ಅನುಭವವನ್ನೂ ಸಂಪೂರ್ಣವಾಗಿ ಅನುಭವಿಸಿ ಅದಕ್ಕೆ ಅನುಭೂತಿಯ ಸ್ಥಾನ ಕೊಟ್ಟು ಬೆಳೆಯಬೇಕು. The feeling of ONENESS..
ಕುವೆಂಪುರವರ ಈ ಕವಿತೆಯನ್ನ ಅನುಭವ ಮತ್ತೆ ಮತ್ತೆ ಆಗಬೇಕು, ಪ್ರತೀ ಸಲವೂ ಹೊಸದೊಂದು ವ್ಯಾಖ್ಯಾನ ಪ್ರೀತಿಗೆ.
ತನುವು ನಿನ್ನದು, ಮನವು ನಿನ್ನದು..
ಎನ್ನ ಜೀವನ ಘನವೂ ನಿನ್ನದು..
ನಾನು ನಿನ್ನವನೆಂಬ ಹೆಮ್ಮೆಯ..
ಋಣವು ಮಾತ್ರವೆ ನನ್ನದು...
ನೀನು ಹೊಳೆದರೆ, ನಾನು ಹೊಳೆವೆನು.
ನೀನು ಬೆಳೆದರೆ, ನಾನು ಬೆಳೆವೆನು.
ಎನ್ನ ಹರಣದ ಹರಣ ನೀನು.
ಎನ್ನ ಮರಣದ ಮರಣವು..
ನನ್ನ ಮನದಲಿ, ನೀನೆ ಯುಕ್ತಿ..
ಯನ್ನ ಹೃದಯದಿ ನೀನೆ ಭಕ್ತಿ..
ನೀನೆ ಮಾಯಾ ಮೋಹ ಶಕ್ತಿಯು.
ಯನ್ನ ಜೀವನ್ಮುಕ್ತಿಯು..