ಮಳೆಯಲ್ಲ ಅದು!!
ಪ್ರೀತಿಯ ಜಾಲದ ಮಡಿಲದು ಪ್ರಕೃತಿ
ಎಲ್ಲೆಲ್ಲೂ ಕಾಣುವ ಪ್ರೇಮದ ಆಕೃತಿ
ವಸಂತನ ಬಿಗಿದಪ್ಪಿದಳು ಪ್ರೀತಿಸಿ
ಕಣ್ಮರೆಯಾದನು ಆತ ಆಕೆಯ ಮರೆಸಿ.

ಚಿಗುರಿದ್ದಳು ಗಿಡಗಳಲ್ಲಿ ಕೇಶರಾಶಿಯೆಂಬಂತೆ
ಹಾಡಿದ್ದಳು ಮಾಮರದಿ ಸಂತಸದ ಮಾತಂತೆ
ಚಾಚಿದ್ದಳು ಬಾಹುಗಳ ಪ್ರಿಯತಮನ ಆಸರೆಗೆ
ಅರಿಯಳವಳು ಬಿಟ್ಟು ಹೋದ ಕಾರಣವ, ಏನಾಯಿತೋ ಅವಗೆ??!!

ಸುರಿಸಿದಳು ಭಾವಗಳ ಕಂಬನಿಯ ಮಳೆ
ಕಾನೆಂಬ ಅರಮನೆಯಲಿ ಕತ್ತಲೆಯ ಹೊಳೆ
ಪ್ರಿಯತಮನ ಕಾದಳು, ಸಿಡುಕಿದಳು ಗುಡುಗಾಗಿ
ತನ್ನ ಪ್ರೀತಿಯ ತೊರೆದು ಹೋದವನಿಗಾಗಿ.

ಜೀವಿಗಳಿಗೆ ಆಸರೆ... ಮಿಂಚಿದಳು ಮಿಂಚಿನಲಿ
ಹುಡುಕುತ ನಡೆದಳು ಋತುಗಳ ಎಣಿಸುತಲಿ
ಮಳೆಯಲ್ಲ ಅದು, ಆ ಪ್ರಿಯತಮೆಯ ಕಂಬನಿ
ಪ್ರೀತಿ ತುಂಬಿದ ಮಡಿಲಿನ ಒಡಲಿನ ದನಿ.

ನಿಂತ ಗುಡ್ದಗಳು ತಡೆದವು ಆಕೆಯ
ನಿಂತಲ್ಲಿ ಹನಿಯಾದಳು ಸವೆದಳು ಜೀವವ
ಯಾರಲ್ಲಿ ಹೇಳಿಯಾಳು ತನ್ನ ನೋವ?
ನೀಲಿ ಮೋಡದಂಥ ಕನಸುಗಳಿಗೆ ನೀಡಿದ್ದಳು ಮನವ...

ಬರಲಿಲ್ಲ ಆತ , ನದಿಯಾಗಿ ಹರಿದಳು,
ತನ್ನ ಕಾಯುವ ಹೇಮಂತನ ಕಂಡಳು,
ವಸಂತನ ಹೇಮಂತನಲಿ ಕಾಣದಾದಳು
ನಿಲ್ಲಲಿಲ್ಲ ಆಕೆ ಹುಡುಕುತ ನಲ್ಲನ ಹೊರಟಳು.

ಮತ್ತೆ ಬಂದ ವಸಂತ, ನಿಂತಳು ಕಣ್ತುಂಬ ಕಂಬನಿಯ ತುಂಬಿ
ತೊರೆದು ಹೋಗನವನು ಮತ್ತೆ ಎಂದು ನಂಬಿ
ಬರುವೆನೆಂದು ನಂಬಿಸಿ ಮತ್ತೆ ಹೋದ
ಕಾದಳು,ಮಿಂಚಿದಳು, ಸಿಡುಕಿದಳು,ಗುಡುಗಿದಳು....
ಕೊನೆಗೂ ಮಳೆಯೇ ಆದಳು....


6 comments:

dinesh said...

ಕವನ ತುಂಬಾ ಚೆನ್ನಾಗಿದೆ...
ಕಾದಳು,ಮಿಂಚಿದಳು, ಸಿಡುಕಿದಳು,ಗುಡುಗಿದಳು....
ಕೊನೆಗೂ ಮಳೆಯೇ ಆದಳು....

Lakshmi S said...

Excellently written !

Anonymous said...

nimma ee poem chennagittu ri... realy excellent.... i admire...

Rajesha said...

Awesome.... tumba samayada nantara olle kannada kavana nododikke siktu....heege bareeta iri.

Rajesh
Abu Dhabi, UAE

Rajesha said...

Awesome.... tumba samayada nantara olle kannada kavana nododikke siktu....heege bareeta iri.

Rajesh
Abu Dhabi, UAE

Niveditha said...

@dinesh and Laxmi

thank you.

@Rajesh

thank you.