ಸಂಜೆ ಸುಮಾರು 7-7:30 ಆಗಿರಬಹುದು.ನಾನು ಒಳಗೆ ಅನ್ನಕ್ಕಿಡ್ತಾ ಇದ್ದೆ. ಅಪ್ಪಾಜಿ ತೋಟದಿಂದಾ ಬರೋ ಹೋತ್ತು. ಪ್ರತೀ ಸಲ ಅಪ್ಪಾಜಿ ತೊಟಕ್ಕೆ ಹೋದಾಗ್ಲೂ ಏನಾದ್ರೂ ತರತಾರೆ. ಮುಳ್ಳೇ ಹಣ್ನ್ seasonನಲ್ಲಿ ಮುಳ್ಳೇ ಹಣ್ಣು, ಮಳೆಗಾಲದಲ್ಲಿ ಕರ್ಕ್ಲಿ ಸೊಪ್ಪು, ಕಟ್ಣೇ ಸೊಪ್ಪು, ಬಾಳೇ ಕಾಯಿ ದಿಂಡಿಗೆ, ಕಳಲೆ.. ಹೀಗೇ.. ಹಾಗಾಗೇ ನಾವು ಪೇಟೆಯಲ್ಲಿ ಇದ್ರೂ ಹಳ್ಳಿಯಲ್ಲಿ ಇದ್ದಂಗೆ..
ಈ ಸಲಾನೂ ಏನಾದ್ರೂ ತಂದಿರಬಹುದು ಅಂತಾ ಅಂದ್ಕೊಂಡು ನಾನೂ," ಯಂತು ಅಮ್ಮಾ?? ತಡಿ ಬಂದಿsss" ಅಂತಾ ಅಂದೆ.
ಅನ್ನಕ್ಕಿಟ್ಟು ಹೊರಗೆ ಬಂದು ನೋಡಿದ್ರೆ ಒಂದು ದೊಡ್ದ ಹಲಸಿನ ಹಣ್ಣು. ತುಂಬಾ ದೊಡ್ದದಾಗಿತ್ತು ಹಲಸಿನ ಹಣ್ಣು. ನಾನೂ ಅದರ size ನೋಡಿ ಆಶ್ಚರ್ಯ ಪಟ್ಟೆ.. ಅಪ್ಪಾಜಿ ನಾವೆಲ್ಲಾ ಆಶ್ಚರ್ಯ ಪದೋದನ್ನ ನೋಡಿ ನಗ್ತಾ ಇದ್ರು..
ನಾನಂದೆ ಅಪ್ಪಾಜಿ ಹತ್ರ,"ಅಪ್ಪಾಜಿ, ಇಷ್ಟ್ ದೊಡ್ಡ ಹಣ್ಣು ಯಲ್ಲಿ, ನಮ್ಮನೆ ತ್ವಾಟದಲ್ಲಿ ಆಗಿತ್ತ? ಯಾನಮ್ನಿ ದೊಡ್ಕಿದ್ದೋ ಮಾರಯಾ. ನೀ ಇದನ್ನ ಹೊತ್ಗ-ಬಂದಿದ್ದು ಸಾಕು ನೋಡು" ಅಂತಾ ಅಂದೆ.
ಅದಕ್ಕೆ ಅಪ್ಪಾಜಿ," ಹೌದೆ.. ನಮ್ಮನೆ ತ್ವಾಟದ್ದೇಯಾ.. ಇಷ್ಟ ಸಲ ಹಣ್ಣಾದ್ರೂವಾ ಮಂಗಂದಿಕ್ಕ ಹಾಳ ಮಾಡ್ಬುಡತಿದ್ವೆ ಮಾರಾಯ್ತಿ.. ನಿಂಗ ಮಕ್ಕ ಬಂದಾಗ ತಿಂಬಲಾಗ್ತು ಹೇಳಿ ಈ ಸಲ ಮರಕ್ಕೆ ಮಿಳ್ಳೇ ಆದಗ್ಲೇಯಾ ಕೊಟ್ಟೆ ಕಟ್ಟಿಟ್ಟಿದಿದ್ದಿ.. ಆದ್ರೂವಾ ಸುಮಾರು ಹಾಳ ಮಾಡದ ಮಂಗಂದಿಕ್ಕ.. ಒಂದೆರಡೇನೋವಾ ಹಂಗೆ ಇತ್ತು.. ಇವತ್ತು ಗಣಪತಿ ಹತ್ರ ಮರ ಹತ್ಸಿ ಕೊಯ್ಷಕ್ಯ ಬಂಜಿ.. ಹೊಡಿರಿ.. ಇವತ್ತು ಊಟವೇ ಬ್ಯಾಡ.." ಅಪ್ಪಾಜಿ ಉತ್ಸಾಹ ನೋಡಿ ನಂಗೆ ತುಂಬಾ ಖುಷಿಯಾಯ್ತು.
ನಾನು ಅಪ್ಪಾಜಿಗೆ ಹೇಳ್ದೆ, "ಆದ್ರೂವಾ ನೀನು ಇಷ್ಟ್ ದೊಡ್ಡದಾ ಹೊತ್ಗ ಬಂದಿದ್ದು ಸಾಕು. ಬಸ್ಸಲ್ಲಿ ಎಲ್ಲಾ ಹಲಸಿನ ಹಣ್ಣಿನ್ದೇ ವಾಸನೆಯಾಗಿಕ್ಕು, ಯಲ್ಲವೂ ಯಷ್ಟ್ ಬೈಕ್ಯಡ್ವೇನ, ಅಲ್ದಾ ಅಪ್ಪಾಜಿ. ಇದು ಬಕ್ಕೆ ಹಣ್ಣ, ಹಲಸಿನ ಹಣ್ಣ?"
"ಹಲಸಿನ ಹಣ್ಣೇಯಾ.. ಯನ್ನ ಅಜ್ಜ ಕಡಬು ಮಾಡಲೆ ಆಗ್ತು ಹೇಳಿ, ಯಾವ್ದೋ ಮರಕ್ಕೆ ಮತ್ಯಾವ್ದೋ ಮರದ್ದ ಕಸೆ ಮಾಡಿಸಿದಿದ್ದ.. ನೋಡಲಕ್ಕಡಾ.. ಸ್ವಲ್ಪೇ ಸ್ವಲ್ಪಾ ಸ್ವಾರೆ ಇಲ್ಲೆ. ಸೋಯ್ ಸಲೆಲ್ಲಾ ಯಷ್ಟ್ ಅರಾಮು ಮಾಡಿದ್ದೆ.." ಹೀಗೇ ಮತ್ತೇನನ್ನೋ ಹೆಳುವವರಿದ್ರು, ಅಷ್ಟರಲ್ಲಿ ನಾನು,
"ವೋ.. ಯಾನೇನು ಕೈ ಮ್ಯಾಣ ಮಾಡ್ಕ್ಯಳಂವಲ್ಲಾ.. " ಅಂತಾ ಅಂದೆ.
ಆಗ ಅಮ್ಮ,"ಕೈ ಮ್ಯಾಣ ಮಾಡ್ಕ್ಯಳದಿದ್ರೆ ಹಣ್ನಿಲ್ಲೆ.. ಬೇಕಿದ್ರೆ ಕಡಿ ಮಾಡಿ ಕೊಡ್ತಿ, ಯಾರ್ ಯಾರಿಗೆ ಬೇಕ ಅವ್ವ್ ಅವ್ವು ಯಣ್ಣೆ ಹಚ್ಕ್ಯಂಡು ಸೋಯ್ಸ್ಕ್ಯಮಲಡ್ಡಿಲ್ಲೆ.." ಅಂದ್ರು. ಅಷ್ಟರಲ್ಲೇ ಅಪ್ಪಾಜಿ ಕೈ ಕಾಲು ಮುಖ ತೊಳಕೊಂಡು ಬರೋದಿಕ್ಕೆ ಹೋದ್ರು. ಅಮ್ಮ ಮೆಟಗತ್ತಿ ಮಣೆ ತಗೊಂಡು ಆ ಹಲಸಿನ ಹಣ್ಣು ಬಗೆಯಲಿಕ್ಕೆ ಶುರು ಮಾಡಿದ್ರು.
ಅಪ್ಪಾಜಿ ಒಂದು ದೊಡ್ದ ಪಾತ್ರೆಯಲ್ಲಿ ತೆಂಗಿನ ಎಣ್ಣೆ, ಉಪ್ಪು, ಹುಳಿ, ಹಶಿ ಮೆಣಸಿನ ಖಾರ ಮಾಡಿಕೊಂಡು ತಂದ್ರು. ಅಮ್ಮಾ ಇನ್ನೇನು ಹಲಸಿನ ಹಣ್ನನ್ನ ಬಗೀತಾ ಇದ್ರು ಅನ್ನೋವಾಗ್ಲೇ ನಾನು ಅಪ್ಪಾಜಿ ಅದಕ್ಕೆ attack ಮಾಡಿದ್ವಿ.. ಉಮ್ಮ್.. ಆ ಮೆತ್ತ ಮೆತ್ತ ಹಲಸಿನ ಹಣ್ಣಿನ ಸ್ವಾಳೆ, ಉಪ್ಪು-ಖಾರ-ಹುಳಿಯಲ್ಲಿ ಅದ್ದಿಕೊಂಡು ತಿನ್ನೋದು.. ಆಹ್!!! ವಾಹ್!! ಏನ್ ರುಚಿ... ನಮ್ಮ ಹತ್ರ ಪೂರ್ತಿ ಹಣ್ಣು ಖಾಲಿ ಮಾದೋಕಾಗಲಿಲ್ಲ.. ಪಕ್ಕದ ಮನೆ, ಪ್ರೇಮಾ ಆಂಟಿ, ಸೌರಭ, ಮಾಮ ಎಲ್ಲರನ್ನೂ ಕರೆದ್ವಿ.. ಎಲ್ಲಾ ಸೇರಿ ಆ ಹಣ್ಣನ್ನ ತಿಂದು ಮುಗಿಸುವಷ್ಟರಲ್ಲಿ.. ಅಬ್ಬಾ.. ತುಂಬಾ ದೊಡ್ಡ ಹಲಸಿನ ಹಣ್ಣು..
ಅಮ್ಮಾ ಎಲ್ಲರಿಗೂ ಹೇಳಿದ್ರು, "ಯಾರೂ ಬೇಜ ವಗ್ಯಡಿ ಮತ್ತೆ.. ಪೊಳದ್ಯಾ ಮಾಡಲೆ ಬತ್ತು".
ನಾನು "ಅಮ್ಮಾ, ನಾಳೇನೇ ಮಾಡೆ ಅಮ್ಮಾ" ಅಂದೆ.
ಅದಕ್ಕೆ ಅಮ್ಮ,"ನಾಳೆ ಮಾಡಲೆ ಬತ್ತಿಲ್ಯೆ.. ಆ ಬೀಜ ಎಲ್ಲ ಹನೀ ಒಣಗವು..ಕಡಿಗೆ ಮಾಡ್ರೆ ಚೊಲೋ ಆಗ್ತು, ಮೊದಲೇ ಒಣಗಿಸಿದ್ದು ಬೀಜ ಇದ್ದು.. ನಾಳೆ ಬೇಕಿದ್ರೆ ಅದರದ್ದು ಮಾಡನ" ಅಂದ್ರು.. well.. ನನ್ನ ತಲೆಯಲ್ಲಿ ಮಾತ್ರ ಆ ಹಲಸಿನ ಹಣ್ಣಿನ ರುಚೀನೇ ತಿರಗ್ತಾ ಇತ್ತು.. ಎಂಥಾ ಹಣ್ಣು.. ವಾಹ್!!