ನೆರಳ ಹೆಸರಿಗೆ



ಒಂಟಿ ನಡಿಗೆಗೆ,
ನೆರಳ ಜೊತೆ
ಕುರುಡು ಕಣ್ಣಿಗೆ ಕೈಯಲ್ಲಿ ಹಣತೆ
ಕನಸುಗಳೋ, ನೆನಪುಗಳೋ...
ವ್ಯತ್ಯಾಸ ತಿಳಿಯದಷ್ಟು ಮಸುಕು
ಎತ್ತ ಸಾಗುತ್ತಿದೆಯೋ ಏನೋ
ಹರುಕು-ಮುರುಕು ಬದುಕು
ನೆನೆದಷ್ಟೂ ಕಂಬನಿಗೇನೂ ಬರವಿಲ್ಲ
ಹಿಡಿ-ಮುಷ್ಠಿಯಷ್ಟು ಮುಗುಳ್ನಗೆ
ಕನ್ನಡಿಯೆದುರು ನಿಂತರೂ ಬಿಂಬವಿಲ್ಲ..
ಎಲ್ಲಿ ಅಡಗಿದೆಯೋ ಏನೋ ಭರವಸೆ
ಆಸರೆಯಾಗಬೇಕಿದ್ದ ಕನಸಿಗೇ ನಿಶ್ಶಕ್ತಿ
ಗುನುಗುನಿಸಲೂ ಹಾಡಿಲ್ಲ..
ನಿರ್ಭಾವದ ವಿರಕ್ತಿ.
ಪ್ರಶ್ನಿಸಬೇಕೇನು??
ಉತ್ತರವೇ ಬೇಡ..
ಬೇಡಬೇಕೇನು??
ನಡೆಯುವುದು ನಡೆಯಲಿ..
ಉಳಿದರೆ ಹೆಕ್ಕಿಕೊಂಡರಾಯಿತು..
ಉಸಿರು ಉಸಿರಿಗೂ ಕತ್ತಲೆಯ ಲೆಕ್ಕ
ಹೆಜ್ಜೆ ಹೆಜ್ಜೆಗೂ ಬಾಯಾರಿಕೆ
ನಿದ್ದೆಯಲ್ಲೂ ಅದೆಂತದೋ ಕನವರಿಕೆ.
ಮಾತು ತೊದಲುವ ಮುನ್ನ
ಮೌನವಾದರೆ ಸಾಕು
ಉಳಿದದ್ದು ನಡೆದ ಗುರುತಿಗೆ
ಜೊತೆಯಾದ ನೆರಳ ಹೆಸರಿಗೆ.

5 comments:

Rajesha said...

simple yet beautiful..... this time it's even better than "maleyalla adhu"....
"Jagali bhaagavata" avra comments ge ee kavana reply ansutthe.....

Rajesh
Mangalore, Abu Dhabi

PARAANJAPE K.N. said...

ನಿಮ್ಮ ಬ್ಲಾಗಿಗೆ ಅಚಾನಕ್ಕಾಗಿ ಬ೦ದೆ, ಕವನವೊ೦ದು ಸಿಕ್ತು.
ಕುರುಡು ಕಣ್ಣಿಗೆ ಕೈಯಲ್ಲಿ ಹಣತೆ
ಕನಸುಗಳೋ, ನೆನಪುಗಳೋ...
ವ್ಯತ್ಯಾಸ ತಿಳಿಯದಷ್ಟು ಮಸುಕು

ಇಷ್ಟವಾದ ಸಾಲುಗಳು, ಚೆನ್ನಾಗಿದೆ.ನನ್ನ ಬ್ಲಾಗಿಗೂ ಬನ್ನಿ
ಕವನ ಲೇಖನಗಳಿವೆ.
www.nirpars.blogspot.com

Jagali bhaagavata said...

ಕವನ ಚೆನ್ನಾಗಿದೆ.....ಆದರೆ ಯಾಕಿಷ್ಟು ವಿಷಾದ? ಎಂತ ಆಯ್ತು?

Niveditha said...

@Rajesh
Thanks..

@Paraanjape
Thanks. ಮತ್ತೆ ಮತ್ತೆ ಬರ್ತಾ ಇರಿ.

@jagali bhaagavata
ಭಾಗವತರೆ, ಏನೂ ಆಗಿಲ್ಲ.. ಇದೊಂದು ಕವನ ಅಷ್ಟೆ.. ನಿಮಗಿಷ್ಟವಾಗಿದ್ದು ಖುಷಿಯಾಯ್ತು.

ammud said...

Niveidtha... ninna aa kalpeneya novina sandharbana iddakintha chennagi viverslikke sadhyana? idu ninna previous article geleya crey me a rivergintha achumechagide