ಸಾಲುಗಳ ತುಂಬಾ ನೀರವತೆ
ಶಬ್ದ ಶಬ್ದದಲ್ಲೂ ನಿಶ್ಶಬ್ದ
ಭಾವಗಳೇ ಇಲ್ಲ ಹೃದಯವೆಲ್ಲಾ ಸಂದಿಗ್ಧ
ಎತ್ತೆತ್ತಲಿಂದಲೋ ಹುಡುಕಿ ತಂದ ಸಾಲು..
ಮನಸ್ಸಿಗೊಂದಷ್ಟು,
ಕನಸ್ಸಿಗೊಂದಷ್ಟು,
ನೆನಪಿಗೊಂದಷ್ಟು,
ತಂದ ಸಾಲಲ್ಲೇ ಪಾಲು..
ಅದೇಕೆ ಬರೆಯಬೇಕೋ ಏನೋ
ಕವಿಗೆ ಕವಿತೆಯನ್ನ...
ಹುಡುಕಿ ಹೊರಟಿದ್ದಾನೆ ಮನದೊಳಗೆ,
ಅಂತರಾಳದೊಳಗೆ
ಕಂಡ ಕನಸುಗಳ ಗಂಟಲ್ಲಿ,
ನೆನಪುಳಿದ ನೆನಪುಗಳಲ್ಲಿ..
7 comments:
ನಿವೇದಿತಾ ಮೇಡಂ ,
ತುಂಬಾ ವಿಭಿನ್ನ ಪ್ರಯತ್ನ ಫಲಕಾರಿಯಾಗಿದೆ.... ನಿಮ್ಮ ಕನ್ನಡ ಕವಿತೆ ಮೊದಲ ಸಾರಿ ಓದುತ್ತಿದ್ದೇನೆ.... ಚೆನ್ನಾಗಿದೆ.... ಮುಂದುವರೆಸಿ....ಮೌನವಾಗಿ .....
@ದಿನಕರ
ವಿಭಿನ್ನ???? ನನ್ನ DreamBoxನಲ್ಲಿ ತುಂಬಾ ಕವನಗಳಿವೆಯಲ್ಲಾ??ಇದು ನಿಮಗಿಷ್ಟ ಆಗಿದ್ದು ಖುಶಿಯಾಯ್ತು..
ಕವಿತೆ ಇಷ್ಟವಾಯಿತು ನಿವೇದಿತಾ, ಇನ್ನುಳಿದವುಗಳ ಕಡೇನೂ ಕಣ್ಣಾಡಿಸಿದೆ, ಅವೂ ಚೆನ್ನಾಗಿವೆ :)
ಚೆನ್ನಾಗಿದೆ ರೀ ನಿಮ್ಮ ಕವನ:):)
ನಿವೇದಿತಾ ಮೇಡಂ ,
ನಿಮ್ಮ ಕಡೆನೂ
ತುಂಭಾ ಚೆನ್ನಾಗಿರೋ
ಕನಸುಗಳಿವೆ!!
ಸ್ವಲ್ಪು
ಸಾಲ ಕೇಳೋಣ
ಅಂತ ಯೋಚನೇ ಮಾಡುತ್ತಿದ್ದೆನೇ
ಇಂತ ಯೋಚನೆ ಬರಲು
ನಿಮ್ಮ ಚೆಂದಾಗೀರೋ ನಿಮ್ಮ
ಕವಿತೆ ಕಾರಣ
ಮತ್ತೆ ಬರೆಯಿರಿ
"ಹುಡುಕಿ ಹೊರಟಿದ್ದಾನೆ ಮನದೊಳಗೆ, ಅಂತರಾಳದೊಳಗೆ ಕಂಡ ಕನಸುಗಳ ಗಂಟಲ್ಲಿ,ನೆನಪುಳಿದ ನೆನಪುಗಳಲ್ಲಿ.."
ಅಹುದು... ಅಂತರಾಳದಿಂದಲೇ ಸ್ಫೂರ್ತಿ ಹೊರಹೊಮ್ಮಬೇಕು.. ಅಂತರ್ದೃಷ್ಟಿಯನ್ನು ಹೊಂದಿದವರೇ ನಿಜವಾದ ಕವಿ/ದಾರ್ಶನಿಕರು .. ನಿಮ್ಮ ಪ್ರಯತ್ನ ಮುಂದುವರೆಯಲಿ..
==> ನ. ಗೋ. ಪ್ರ.
ಈ ಕವನ ಚೆನ್ನಾಗಿ ಮೂಡಿಬಂದಿದೆ!!! ಎಲ್ಲ ಲೇಖನಗಳಲ್ಲೂ ಬರವಣಿಗೆಯ ಶೈಲಿ ಚೆನ್ನಾಗಿದೆ......ಡ್ರೀಮ್ ಬಾಕ್ಸ್ ನಲ್ಲಿ ಮತ್ತಷ್ಟು ವಿಚಾರಗಳು ಮೂಡಿಬರಲಿ...
ನಾಗರಾಜ್ ಎಂ ಎಂ
Post a Comment