ತಲೆಗಳಿ


Dear Dreambox,
’ತಲೆಗಳಿ’- ತಲೆಮಾರು/ವಂಶಾವಳಿ.

Well ಈಗ್ಯಾಕೆ ಈ ’ತಲೆಗಳಿ’ ಯ ಬಗ್ಗೆ Grammer details ಕೊಡ್ತಾ ಇದ್ದೀನಿ ಅಂತಾ ನೀನು ಯೋಚಿಸ್ತಾ ಇದ್ದಿಯಾ.. ಅಲ್ವಾ? Well, ಈಗ ನಾನು ಮನೆಯಲ್ಲಿದ್ದೀನಿ. ಶಿರಸಿಯಲ್ಲಿ. ನಿನ್ನೆ ಇಲ್ಲಿ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. So you must have got the hint.. right??Right.. ಆ ಪುಸ್ತಕದ ಹೆಸರು ’ತಲೆಗಳಿ’. ಕಾದಂಬರಿಕಾರ- ದಿ ವಿ.ಟಿ.ಹೆಗಡೆ ಶೀಗೇಹಳ್ಳಿ.

ನನಗೆ ಈ ಪುಸ್ತಕ ಯಾಕೆ attract ಮಾಡ್ತು ಗೊತಾ?? ಕಾದಂಬರಿಯ ಸಂಭಾಷಣೆ. ಈ ಕಾದಂಬರಿಯ ಸಂಭಾಷಣೆ ’ಹವ್ಯಕ’ ಭಾಷೆಯಲ್ಲಿದೆ. ನಿರೂಪಣೆ ಸಾದಾ ಕನ್ನಡ(ಗ್ರಾಂಥಿಕ ಕನ್ನಡ)ದಲ್ಲಿ ಇದ್ದರೂ ಪ್ರತಿಯೊಂದು character ಕೂಡ ಇಲ್ಲಿಯ local ಭಾಷೆಯಲ್ಲಿ ಮಾತಾಡುತ್ವೆ.

ಈ ಕಾದಂಬರಿಯ ಮೊತ್ತೊಂದು ವಿಶೇಷ ಅಂದ್ರೆ, ಇದರ ದೇಶವ್ಯಾಪ್ತಿ. Well.. 'ದೇಶವ್ಯಾಪ್ತಿ' sounds so big.. ಈ ಕಾದಂಬರಿಯಲ್ಲಿ ಬರೋ ಊರುಗಳು, ಶಿರಸಿ,ಸಿದ್ಧಾಪುರ,ಬಿಳಗಿ ಸೀಮೆಯ ಊರುಗಳು. ಮತ್ತೆ ಈ ಕಾದಂಬರಿಯಲ್ಲಿ ನಡಯುವ ಪ್ರತಿಯೋಂದು ಸನ್ನಿವೇಶವೂ ಸ್ವಾತಂತ್ರ್ಯ ಪೂರ್ವದ್ದು.ಆಗಿನ ಕಾಲದ ಹವ್ಯಕರನ್ನೂ ಸೇರಿದಂತೆ, ಅಡಿಕೆ ಬೆಳೆಗಾರರ,ಆರ್ಥಿಕ,ಸಾಮಾಜಿಕ, ಭಾವನಾತ್ಮಕ ನೆಲೆಗಟ್ಟಿನ(baseline) ಮೇಲೆ ಹೆಣೆಯಲ್ಪಟ್ಟಿದೆ. ಇಲ್ಲಿನ characterಗಳು ಪ್ರಾದೇಶಿಕ ನೆಲೆಯಲ್ಲಿ ಬದುಕಿನ ಸಂಕೀರ್ಣತೆಯನ್ನು ಹೊತ್ತು,ಮನಸ್ಸಿನಲ್ಲಿ ತುಂಬಾ ಕಾಲ ಅಚ್ಚಳಿಯದೆ ಉಳಿದುದಿಡುವಂತಿದೆ. So, This novel is not just another novel with an exciting storyline. This is a piece of history, folkore and everything about 'That time'.

ಮತ್ತೊಂದು ವಿಶೇಷ ಅಂದ್ರೆ, ಈ ಕಾದಂಬರಿಯ ಪಾತ್ರಗಳಲ್ಲಿ ಯಕ್ಷಗಾನ,ಗಮಕ,ತಾಳ-ಮದ್ದಲೆ ಸಾಂಸ್ಕೃತಿಕ ಪ್ರಾಕರಕಳೊಂದಿಗೆ, ಕೃಷಿ,ಅಡುಗೆ ನಡುವಳಿಕೆಗಳ ಮಾದರಿಯನ್ನ ಅನುಭವಿಸಬಹುದು. ಈ ಕಾದಂಬರಿಯ ಮುಖ್ಯ ಪಾತ್ರಗಳಾದ ಸುಬ್ಬರಾಯ ಹೆಗಡೆ ಮತ್ತು ಅವನ ಹೆಂಡತಿಯಾದ ಸರಸ್ವತಿ, ಅವರ ನಡುವಿನ ಸರಸ ದಾಂಪತ್ಯ, ಅಂತರ್ಗತ ಪ್ರೇಮಭಾವ, ಸರಳ ಮುಗ್ಧತೆ ಈ ಎಲ್ಲ ಕಾರಣಗಳಿಂದ, all of us can see a part of ourselves in them.

ಈ ಕಾದಂಬರಿಯ storyline ಏನು ಅಂದ್ರೆ, ಸುಬ್ಬರಾಯ ಹೆಗಡೆಯ ಜೀವನ. ಅವನ ಅತ್ಯಂತ ಸಂವೃದ್ಧವಾದ ಜೀವನ, ದಾರಿದ್ರ್ಯ ವಾಗಿ turn ಆಗೋದು, and then ಮತ್ತೆ ಅವನು ತಾನು ಕಳೆದುಕೊಂಡಿದ್ದನ್ನೆಲ್ಲ ಪಡೆಯೋದು.. and everythying in between this journey.
ಕಾದಂಬರಿಕಾರರಾದ ದಿವಿ.ಟಿ.ಹೆಗಡೆ ಶೀಗೇಹಳ್ಳಿಯವರ ಮತ್ತೋಂದು ವಿಶೇಷ ಅಂದ್ರೆ, ಯಾವುದನ್ನೂ ವಾಚ್ಯವಾಗಿ ಹೇಳದೇ ಓದುಗನ ಕಲ್ಪನೆಗೆ ಬಿಡುವಂಥದ್ದು. ಈ ಕಾದಂಬರಿಯಲ್ಲಿ, ಬರೊ ಶೈಲಜೆ ಮತ್ತು ಸುಬ್ಬರಾಯನ ನಡುವಿನ ಸಂಬಂಧ ಇದಕ್ಕೋಂದು ಉದಾಹರಣೆ.


ಯಕ್ಷಗಾನ ಪ್ರಿಯರಿಗಂತು ಈ ಕಾದಂಬರಿ, ಹೋಳಿಗೆ ಊಟದ ಹಾಗಿದೆ. Well.. ’ತಲೆಗಳಿ’ also has some drawbacks as it goes a little dramatic sometimes.. and a little 'too much to believe ' ಅನ್ನಿಸುವಂತಹ ಸನ್ನಿವೇಶಗಳು.. ಆದ್ರೆ Its Ok.. and they are negligible.
ಈ ಕಾದಂಬರಿಯನ್ನ ಓದತಾ ಇದ್ರೆ, ಎಲ್ಲೋ ನಾನೂ ಅವರ ನಡುವೆ ಇದ್ದೀನಿ ಅನ್ನಸಲಿಕ್ಕೆ ಶುರುವಾಗುತ್ತೆ.S.. Its worth a read.
The other stats of the book is as below.
ಕಾದಂಬರಿಕಾರ: ದಿವಿ.ಟಿ.ಹೆಗಡೆ ಶೀಗೇಹಳ್ಳಿ.
ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು.
ಬೆಲೆ: 300 ರೂ.
ಸರಿ ಹಾಗಿದ್ರೆ, ಸಿಗೋಣ.
Bye :)
3 comments:

Anonymous said...

odi nodteeni,,,, any way thanks...

Jagali bhaagavata said...

idu ankitadalli sigtaa? eega V.T.Hegde avru ilva?

Jagali bhaagavata said...

akshara jodane andre enta?
munche aadre ok. ivaaga type maadodakke akshara jodane antaara?