ನಿನ್ನ ಪ್ರೀತಿಗೆ...


"Happy birthday to you....
Happy birthday to you....
Happy birthday dear Niviiiii....
Happy birthday to youuuuuuuuuuuu...."

ನನ್ನ birthday celebration... ನನ್ನ room-mates ಚಂದದ cake ತಂದಿದಾರೆ... ನನಗೋಸ್ಕರ roomನೆಲ್ಲ decorate ಮಾಡಿದಾರೆ....
"Hey.. Nivi... Make a wish.."

****************************************************************************

"ಓಯ್!!! ಏನ್ ಮಾಡ್ತಾ ಇದೀಯೋ?? ನಾಳೆ ನಂಗೆ office ಇದೆ.. ಈ ರಾತ್ರಿಲಿ ಎಲ್ಲಿಗೆ ??"
"Nivvi.. ಎಷ್ಟು questions ಕೇಳತೀಯಾ... ಸುಮ್ನೆ ಬಾ..ನಂಗೆ bike ride ಮಾಡೊಕೆ ತೊಂದ್ರೆ ಆಗುತ್ತೆ.. "
"he he he... ಒಳ್ಳೆ joke!!!Please ಕಣೋ.. ಎಲ್ಲಿಗೆ ಹೋಗ್ತಾ ಇದೀವಿ ಅಂತಾನಾದ್ರೂ ಹೇಳಬಾರ್ದಾ?? ಈ ಥರಾ ಹನ್ನೂಂದುವರೆ -ಯಷ್ಟೋತ್ತಿಗೆ ಎಲ್ಲಿಗೆ ಕರಕೊಂಡು ಹೋಗ್ತಾ ಇದ್ದಿಯಾ??"
"ನಿಂಗೆ ನನ್ನ ಮೇಲೆ ನಂಬಿಕೆ ಇದೆ ಅಲ್ವಾ??"
"ಅರೆ, ನಂಬಿಕೆ.. ಹ್ಮ..."
"ಸರಿ ಹಾಗಿದ್ರೆ, ಈಗ ಸುಮ್ನೆ ನನ್ನ ಘಟ್ಟಿ ಹಿಡಕೊಂಡು ಕೂತ್ಗೋ.. ok??"
"ಹ್ಮ್... ಸರಿ.. ಈ ಮಳೆ ನಿಂತ ವಾತಾವರಣದಲ್ಲಿ, ನಿನ್ನ ಜೊತೆ ಈಥರ ನಿನ್ನ bike ಮೇಲೆ... wel.. its really a 'WOW' feeling ಕಣೋ.."
ಕನ್ನಡಿಯಲ್ಲಿ ನಿನ್ನ expression ಕಾಣಿಸಲಿಲ್ಲ.. ನಿನ್ನ ಬೆನ್ನಿಗೇ ಅಂಟಿ, ನಿನ್ನಪ್ಪಿ, ಕಣ್ಣ ಮುಚ್ಚಿಕೊಂಡೆ.. ತಣ್ಣನೆ ಗಾಳಿಗೆ ಮನಸ್ಸು ತಂಪಾದ ಅನುಭವ...

ನಿನ್ನೆದೆಗೆ ನನ್ನಾನಿಸಿಕೋ ಗೆಳೆಯ,
ಬರಡಾದ ಭೂಮಿ ಚಿಗುರಿಕೊಂಡೀತು.
ಮುತ್ತಿಟ್ಟು ಕರೆದುಬಿಡು ಹೆಸರ,
ತಂಪು ತಂಗಾಳಿಗೂ ಬಿಸಿಯೇರೀತು.****************************************************************************

"Oye!!! where you lost Madam?? Make a wish.. make a wish... Blow the candles.."
"yes.. come on.."

****************************************************************************

"Nivvi.. ಈಗ ಕಣ್ ಮುಚ್ಚು.. I will have to blindfold you..."
"Blind fold??? Please ಕಣೋ... ಅದೆಲ್ಲ ಯಾಕೆ?? Tell me whats happening??"
"ಆಹ್!! ನಿನ್ನ ಮೂರ್ಛೆ ತಪ್ಪಿಸಿ ಕರಕೊಂಡು ಬರಬೇಕಿತ್ತು ನೋಡು... You ask too many questions.. Now ಕಣ್ ಮುಚ್ಚು.."
"Agh!!!! Ok... ಆ ಮೇಲೆ ನಂಗೇನಾದ್ರು ಆದ್ರೆ ನೀನೇ ಹೊಣೆ.."
"Ok, baba.. ಈಗ ನನ್ನ ಕೈ ಹಿಡಕೊಂಡು ನಡಿ... and follow my instructions.. ಸರಿನಾ??"
"ಹ್ಮ್... Ok.. ನೀನೊ, ನಿನ್ನ suprisesಓ..."


ಕಣ್ಣ ಮೇಲೊಮ್ಮೆ ಸವರಿಬಿಡು ಕೈಯ,
ಬಣ್ಣದ ಕನಸು ಮೂಡೀತು
ಒಂಚೂರು ಹಂಚಿಬಿಡು ಉಸಿರ,
ಇಂಚಿಂಚಲೂ ಕಂಪು ಹರಡೀತು.********************************************************************************

"Nivvi.. How was the cake??"
"Nivvi.. Tell us what wish did you make??"
"Arey.. She must have wished for a handsome husband... he he he.."

********************************************************************************

"So... This is it.. Open your eyes.. Nivvi.."
ನಾನು ನಿಧಾನವಾಗಿ ಕಣ್ಣು ತರೆದಿದ್ದೆ....
WooooooWWWWW..!!!! I was speechless..
what a beautiful lake...
ಕೆರೆ, ತಂಪು ಗಾಳಿ, ಎಲೆಗಳಿಂದ ಉದರತಾ ಇರೋ ಮಳೆ ಹನಿ, ಆ ಸೂಯ್ ಅನ್ನೋ ಗಾಳಿಯ ನವಿರಾದ ಸದ್ದು, ಜೊತೆಗೇ ಹರಡಿರೋ ಒದ್ದೆ ಮಣ್ಣಿನ ಕಂಪು,ಒದ್ದೆ ಒದ್ದೆ ನೆಲ, ಬೆಚ್ಚಗಿನ ನಿನ್ನ ಕೈ, ನಡಗತಾ ಇರೋ ನನ್ನ ಅಪ್ಪಿ ಹಿಡಿದ ನೀನು...
ಅಷ್ಟೋಂದು ಪ್ರೀತಿಸ್ತೀಯೇನೋ ನನ್ನ ನೀನು??
ಕಪ್ಪು ಬಾನಿಗೆ, ಅಲ್ಲಲ್ಲಿ ಸಣ್ಣ ಸಣ್ಣ ನಕ್ಷತ್ರ, ಗುಲಾಬಿ-ಕೆಂಪು ಬಣ್ಣದ ಹಗುರು ಮೋಡ... ಆಕಾಶದ ಬಿಂಬ ಹಿಡಿದು ನಿಂತ ಕೆರೆಯ ನೀರು....
ಅಹ್!! ಯಾಕಿಷ್ಟು ಪ್ರೀತಿಸ್ತೀಯಾ ನನ್ನ ನೀನು??

ತಂಪು ರಾತ್ರಿ,
ನಿನ್ನ ಮುಗುಳು ನಗೆ
ಪ್ರೀತಿಯ ಬಣ್ಣದ ಚಂದ್ರ
ಇಣುಕಿ ನೋಡುವ ನಕ್ಷತ್ರ
ನಾನು ನೀನಾಗಲು ಇನ್ನೇನು ಬೇಕು??*****************************************************************************

"Nivvi... So what plans for the day??"
"Hey.. chalo.. lets dance.. Nivvi.. tell us your favourite song.. lets dance.."

****************************************************************************

"ನನಗೇನು ಹೇಳಲಿ ಅಂತಾ ಗೊತಾಗತಾ ಇಲ್ಲ ಕಣೋ..."
"Nivvi... " ನನ್ನ ಕಿವಿಗೆ ಹತ್ತಿರದಲ್ಲಿ ಪಿಸುಗುಟ್ಟಿದ್ದೆ ನೀನು.. ಆ ಬಿಸಿ ಉಸಿರಿಗೆ ನನ್ನೆದೆ ಒಂದು ಘಳಿಗೆ ನಿಂತಂತಾಗಿತ್ತು...
"Nivvi.. ಏನೂ ಹೇಳಬೇಡ.."
ನಿಧಾನವಾಗಿ ನಿನ್ನ jacketನಿಂದ ಒಂದು pastry ತೆಗೆದೆ ನೀನು, ಪುಟ್ಟ ಪುಟ್ಟ candles, ನನಗೆ ತುಂಬಾ ಇಷ್ಟವಾದ White and pink Lillies...
"Happy birthday My Love..." ಮತ್ತೆ ಪಿಸಿಗುಟ್ಟಿದ್ದೆ, ನಮ್ಮಿಬ್ಬರ ನಡಿವಿನ ಗಾಳಿಗೂ ಕೇಳದಂತೆ..
ನಿನ್ನ ಇನ್ನಷ್ಟು ಹತ್ತಿರ ಕರೆದು, ಘಟ್ಟಿಯಾಗಿ ನಿನ್ನಪ್ಪಿದೆ ನಾನು..
"Thank you.." ಮತ್ತೇನೂ ನನ್ನಮಾತಲ್ಲಿ ಹೊರಡಲೇ ಇಲ್ಲ...
I ws speechless.. ಅದೆಷ್ಟು ಸುಲಭವಾಗಿ you would me make me fall in love with you very moment.. each and Every moment...
I fell in Love with you everytime.. as if it was the very first time...
"I Love YOU.. Nivvi..." ನಿನ್ನ ಧ್ವನಿಯೊಂದು ಬಿಟ್ಟರೆ ನನಗೆ ಇಡೀ ಜಗತ್ತಿನ ಪರಿವೇ ಇರಲ್ಲಿಲ್ಲ...
ಅದು ಯಾವಗ ಕಣ್ಣಿಂದ ಒಂದು ಹನಿ ಉದುರಿತೋ ಗೊತ್ತೇ ಆಗಲಿಲ್ಲ...
ಆ ರಾತ್ರಿ ನಿನ್ನ ಜೊತೆ, ಆ ಥರ... ನೀನಿಲ್ಲದಿದ್ರೆ ನಾನು ಏನು ಮಾಡತಿದ್ದೆ???
I was too much filled with emotions... and you were looking at me as if you understood every bit of it..
I hugged you close.. very close to my heart...
ಆಕಾಶದಡಿ, ಆ ಕೆರೆಯ ದಡದಲ್ಲಿ, ನಿನ್ನಪ್ಪುಗೆಯಲ್ಲಿ ಕಳೆದು ಹೋಗಿದ್ದೆ ನಾನು...

ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ...********************************************************************************

"Oye.. Nivvi..."
"Haan?? Yes.. AUhmmm... I would like to listen to.. Ahmmm.. Any song.. Any.."

*********************************************************************************

ನೂರಾರು ಮಾತು,
ಏಷ್ಟೋಂದು ನಗು,
ಕಡೆಗೊಂದು ನಿಟ್ಟುಸಿರು..
ನಾಳೆಯ ಜೊತೆಗೆ ನೀನಿರುವುದಿಲ್ಲವಲ್ಲ!!!!

13 comments:

Jagali bhaagavata said...

ನಿನ್ನೆದೆಗೆ ನನ್ನಾನಿಸಿಕೋ ಗೆಳೆಯ,
ಬರಡಾದ ಭೂಮಿ ಚಿಗುರಿಕೊಂಡೀತು.
ಮುತ್ತಿಟ್ಟು ಕರೆದುಬಿಡು ಹೆಸರ,
ತಂಪು ತಂಗಾಳಿಗೂ ಬಿಸಿಯೇರೀತು.

ಕಣ್ಣ ಮೇಲೊಮ್ಮೆ ಸವರಿಬಿಡು ಕೈಯ,
ಬಣ್ಣದ ಕನಸು ಮೂಡೀತು
ಒಂಚೂರು ಹಂಚಿಬಿಡು ಉಸಿರ,
ಇಂಚಿಂಚಲೂ ಕಂಪು ಹರಡೀತು

chennaagide saalugalu. ishta aaytu.

ninna haleya posts enaaytu?

ಸುಶ್ರುತ ದೊಡ್ಡೇರಿ said...

ಚಂಂಂಂದ ಇದೆ.. ಈಈಷ್ಟ ಆಯ್ತು. :-)

ಶ್ರೀನಿಧಿ.ಡಿ.ಎಸ್ said...

nice one.

Niveditha said...

@Jagali bhaagavata
ಭಾಗವತರೆ, ಧನ್ಯವಾದಗಳು..
ನನ್ನ ಹಳೆಯ postನ delete ಮಾಡಿದೀನಿ.

@ಸುಶ್ರುತ ದೊಡ್ಡೇರಿ
ಧನ್ಯವಾದ.. :)

@ಶ್ರೀನಿಧಿ.ಡಿ.ಎಸ್
Thank you..

ದಿನಕರ ಮೊಗೇರ.. said...

ನಿವೇದಿತಾ,
ಏನು ಬರೆಯಲಿ ತಿಳಿಯುತ್ತಿಲ್ಲ...... ಶಾರ್ಟ್ ಫಿಲ್ಮ್ ನೋಡಿದ ಹಾಗಾಯಿತು..... ಹೊಸ ಥರದ ನಿರೂಪಣೆ..... ಕವನ...... ಕನಸು...... ಎಲ್ಲಾ ಸೂಪರ್...... ತುಂಬಾ ದಿನದ ನಂತರ ಪೋಸ್ಟ್ ಮಾಡಿದ್ದೀರಾ.... ಮತ್ತೆ ಮತ್ತೆ ಬರೆಯಿರಿ......

Smiley said...

Happy Birthday Nivi :)

Sheshachal said...

A new style of narration....nice imagination...but little complex for the reader in guessing the implication......but flashback picturisation in the form of article is the talent of nivi here...keep going nivi......

Niveditha said...

@Dinakar
Thank you.. I will surely write something more often..

@Smiley
Its not my birthday.. :) anyways.. Thank you..

@Shesh..
hey shesh.. Thank you..:)

Anonymous said...

it takes me to the different world whenever i read ur writings... Im still in that dream world. trying to comeback for a long time

Niveditha said...

@Anonymous
WEl.. Thats a huge compliment.. Thank you :)

Anonymous said...

ITZ NICE ONE YA:-)

Jagali bhaagavata said...

yaake update maadtilla?

ಸ್ನೇಹ ಸಿಂಚನ said...

Your crazy/romantic words took me into romantic world...I really enjoyed reading..I have become a big Fan of you Niveditha...You are a wonderful bloggers.