ದೂರ ನಡೆಯಬೇಕಿನ್ನೂ ನಾನು


ಹನಿಹನಿಯ ಮಳೆ ಹನಿ..
ಕೆನ್ನೆ ಮೇಲೆ..
ಕಣ್ಣೆತ್ತಿ ನೋಡಿದರೆ
ದಟ್ಟ ಕಪ್ಪು ಬಾನು..
ದೂರ ನಡೆಯಬೇಕಿನ್ನೂ ನಾನು..
ಜೊತೆಗಿರಬೇಕಿತ್ತು..
ಒಂದು ಕನಸು..
ಎಲ್ಲ ಮರೆತು ನೆನೆವ
ಒಂದು ಮನಸ್ಸು..
ಹರಡಿದರೆ ಬೆಳ್ಳಗಿನ
ರೆಕ್ಕೆಯಾಗುವ ಬೆರಳು
ಎದೆಯಲಿ ಉಸಿರಂತೆ
ತುಂಬುವ ನೆನೆಪುಗಳು
ನಿದ್ದೆಯಲ್ಲಿ ಕಂಡ
ಬಣ್ಣದ ಊರು..
ಅದಾರದೋ ಎದುರಲ್ಲಿ ಮರೆತ
ಮಾತು ನೂರಾರು
ಜೊತೆಗಿರಬೇಕಿತ್ತು
ಹೆಜ್ಜೆಗೊಂದು ಮುತ್ತು ಕೊಡುವ ನೆರಳು..
ಕಿವಿಯಲ್ಲಿ ಪಿಸುಗುಟ್ಟು ಕಚಗುಳಿಯಿಡುವ ದನಿ
ದೂರ ನಡೆಯಬೇಕು ಇನ್ನೂ..
ಜೊತೆಗಿರಬೇಕಿತ್ತು...
ಇಬ್ಬರಾದರೂ ಒಬ್ಬರಾದಂತ ನಾನು..
ನನ್ನೊಡನೆ ಹಗುರಾಗುವ ಬಾನು..

4 comments:

Jagali bhaagavata said...

ಚೆನ್ನಾಗಿದೆ ನಿವ್ಸ್.
ಆದ್ರೆ ಕೆಲವೊಂದು ಸರ್ತಿ ನೀನು ಒತ್ತಾಯಪೂರ್ವಕವಾಗಿ ಸಾಲುಗಳನ್ನ ಸೇರಿಸ್ತೀಯ ಅನ್ಸತ್ತೆ.
** ಅದಾರದೋ ಎದುರಲ್ಲಿ ಮರೆತ
ಮಾತು ನೂರಾರು**
ಈ ಸಾಲು ಕವನದ ಒಟ್ಟಂದಕ್ಕೆ ಹೊಂದಿಕೊಳ್ಳಲ್ಲ.
ನಿನ್ನ ಎಲ್ಲ ಕವನಗಳ ಶೈಲಿ ಹೆಚ್ಚುಕಡಿಮೆ ಒಂದೇ. ಆದ್ರೆ ಓದಲಿಕ್ಕೆ ಚೆನ್ನಾಗಿರತ್ತೆ.

ಜೊತೆಗಿರಬೇಕಿತ್ತು..
ಒಂದು ಕನಸು....
DreamBox -ಗೆ ಕನಸುಗಳ ವಿರಹವೇ? :) ಛೆ..ಛೆ...ಛೆ!!! ಕಾಲ ಕೆಟ್ಟೋಯ್ತು!!

ಇಬ್ಬರಾದರೂ ಒಬ್ಬರಾದಂತ ನಾನು....
ಹ್ಮ್...ನಿನ್ನೊಡನೆ 'ಒಬ್ಬರಾಗುವಂತ' ಆ 'ಇನ್ನೊಬ್ಬರು' ಬೇಗ ಸಿಗಲಿ :)

ದಿನಕರ ಮೊಗೇರ.. said...

ಕಿವಿಯಲ್ಲಿ ಪಿಸುಗುಟ್ಟು ಕಚಗುಳಿಯಿಡುವ ದನಿ
ದೂರ ನಡೆಯಬೇಕು ಇನ್ನೂ..
ಜೊತೆಗಿರಬೇಕಿತ್ತು.
ಸುಂದರ ಸಾಲುಗಳು..... ತುಂಬಾ ಚೆನ್ನಾಗಿದೆ....

Niveditha said...

@Jagali bhaagavata
ಹ್ಮ್ಮ್.. ನಿಜ.. ಕೆಲವೊಮ್ಮೆ ಆಗುತ್ತೆ..
ನಿಮಗೆ ಗೊತ್ತಾಗಿದ್ದು ಒಂದು ಥರದಲ್ಲಿ ಖುಷಿಯಾಯ್ತು..
DreamBoxಗೆ ಕನಸುಗಳ ವಿರಹ ಅಲ್ಲ.. ಹೊಸ ಕನಸುಗಳ ಆಸೆ ಅಷ್ಟೆ!!

@ದಿನಕರ ಮೊಗೆರ
ಧನ್ಯವಾದಗಳು..

"ನಾಗರಾಜ್ .ಕೆ" (NRK) said...

ತುಂಬಾ ಚೆನ್ನಾಗಿದೆ, ಬೇಗ ಇಬ್ಬರು ಒಬ್ಬರಾಗಿ. ಅಂತದ್ದೊಂದು ಕನಸು ನಡೆದಷ್ಟು ದೂರ ನಿಮ್ಮ ಜೊತೆಗಿರಲಿ :-)