ಅರಿವೇ ಇಲ್ಲದವರು


ಅರಿವೇ ಇಲ್ಲದವರು...
ನಾವು, ಜಗದ ಪರಿವೇ ಇಲ್ಲದವರು.

ಕಣ್ಣಾಮುಚ್ಚಾಲೆಯಾಟ,
ಎಲ್ಲರೆದುರು..
ಒಬ್ಬರೊಳಗೊಬ್ಬರನು ಹುಡುಕುತಾ..
ಕಂಡೊಡನೆ ಕಂಗಳಲಿ ಹೊಳಪು,
ಕಾಣದಿರೆ, ಜಾರುವುದು ಮೈ-ಮನಗಳ ಹುರುಪು..
ಎಲ್ಲಿ ಅಡಗುವೆವೋ?
ಎಲ್ಲಿ ಹುಡುಕುವೆವೋ?
ಅರಿವೇ ಇಲ್ಲದವರು...
ನಾವು, ಜಗದ ಪರಿವೇ ಇಲ್ಲದವರು.

ನಿಲ್ಲುವೆವು ನಿಶ್ಚೇತರಂತೆ
ನಡುಕ ಮೈಯೊಳಗೆ,
ಮಳೆಯಲಿ ನೆಂದವರಂತೆ...
ನೆರಳು ತಾಕಿದರೆ ಸಾಕು ಚಿಗುರುವೆವು
ತಾಕದಿರೆ, ಬಾಡಿ ಮುದುರುವೆವು..
ಹೇಗೆ ಅರಳುವೆವೋ?
ಹೇಗೆ ಬಾಡುವೆವೋ?
ಅರಿವೇ ಇಲ್ಲದವರು...
ನಾವು, ಜಗದ ಪರಿವೇ ಇಲ್ಲದವರು.

ಕೈಯಲ್ಲಿ ಕೈಯ ಹಿಡಿದು
ಎತ್ತಲೋ ಪಯಣ,
ಮಾತು ಮೂಕವಾದೊಡೆ
ದಣಿವಾರಿಸುವ ಚುಂಬನ..
ಅಲ್ಲೇ ಬೆರೆವುದು ಕಣ್ಣು ಅದೊಂದು ಕ್ಷಣ
ಮರೆತೇ ಬಿಡುವೆವು ಜಗವ,
ಕಾಣುವುದು ಬರಿಯ ಗಗನ..
ಎಲ್ಲಿ ನಿಲ್ಲುವೆವೋ?
ಎತ್ತ ಸಾಗುವೆವೋ?
ಅರಿವೇ ಇಲ್ಲದವರು...
ನಾವು, ಜಗದ ಪರಿವೇ ಇಲ್ಲದವರು.

ಜಗತ್ತು ನಮ್ಮ ನೋಡುವುದಂತೆ
ನೋಡಿ ನಗುವುದಂತೆ
ನಮಗೇನೂ ತಿಳಿಯದು
ಕಂಗಳಲಿ ಕಂಗಳು ಬೆರೆವುದು,
ಮನದಲಿ ಆಸೆ ಅರಳುವುದು..
ಸೇರಿ ಹಾರುವೆವು ನಾವು
ಜೋಡಿ ಹಕ್ಕಿಗಳಾಗಿ
ಅರಿವೇ ಇಲ್ಲದವರಂತೆ..
ಜಗದ ಪರಿವೇ ಇಲ್ಲದವರಂತೆ..
ನಾವು,
ಅರಿವೇ ಇಲ್ಲದವರು,
ಜಗದ ಪರಿವೇ ಇಲ್ಲದವರು..

2 comments:

Vishwanatha Krishnamurthy Melinmane said...

Niveditha avre,

Eko Eno e-nanna manasu uyyaleyanthe thoogide !
Fan antha helabeka athava abhimani antha helabeko gottaguttilla...Adene irli,
Nanu nimma fan agibittiddeeni...
Nimma swayam rachitha kavanagalannu odi artha aythu...Kannadakkeke 7 jnanapeetha eke dakkide antha !

Nimma prayathnavannu munduvaresi...
Sarvashakthi Saraswathi/Sharadeyu Nimma kanasannu nanasagisali endu prarthisuttene...

--
Vishu

Niveditha said...

ಅಹ್!! fan ಅಂತಾ ಎಲ್ಲ ಹೇಳಿದ್ರೆ ಕಷ್ಟ ಆಗುತ್ತೆ.. ನಿಮಗಿಷ್ಟ ಆಗಿದ್ದು ಖುಷಿ ಆಯ್ತು. ಧನ್ಯವಾದಗಳು.