ಕವಿಗೊಂದು ಸಾಲು ಬೇಕಿತ್ತು

ಕವಿಗೊಂದು ಸಾಲು ಬೇಕಿತ್ತು
ಸಾಲವಾದರೂ ಸರಿ
ಭಾವಗಳಿಗೆ ಭಾಷೆ ಬೇಕಿತ್ತು

ಅದೆಷ್ಟು ಹುಡುಕಿದರೂ
ಅಂತರಾಳವೆಲ್ಲ ಖಾಲಿ ಖಾಲಿ
ಬರಿದಾದ ಮನಸಿಗೆಕೋ ಏನೋ
ಅಂಗೈ ಅಗಲದ ಚಾವಿ
ಕಷ್ಟ ಕಾಲಕ್ಕಾಗಲಿ ಎಂದು
ಸ್ವಲ್ಪ ಬಚ್ಚಿಟ್ಟಿತ್ತು
ಅದೆಲ್ಲಿ ಇಟ್ಟನೋ ಕವಿ
ಕವಿತೆ ಕಳೆದು ಹೋಯಿತು...

ಕವಿಗೊಂದಷ್ಟು ಕಂಬನಿ ಬೇಕಿತ್ತು
ಸಾಲವಾದರೂ ಸರಿ
ಮನದ ಭಾರ ಇಳಿಸ ಬೆಕಿತ್ತು.

ನೋವ ನುಂಗುವುದು ಗಂಟಲ ನರ..
ತುಟಿಗಳಿಗೇನು,
ನಗುತ್ತಲೇ ಇರುತ್ತವೆ!!!
ಮೂಕವಾಗಿದ್ದು ಎದೆಯ ಸ್ವರ..
ಕಣ್ಣುಗಳಿಗೇನು,
ಮಾತನಾಡುತ್ತಲೇ ಇರುತ್ತವೆ!!!

ಕವಿಗೊಂದಷ್ಟು ಕನಸು ಬೇಕಿತ್ತು
ಸಾಲವಾದರೂ ಸರಿ
ನೆನಪುಗಳಿಗೆ ನೆರಳು ಬೇಕಿತ್ತು.

14 comments:

harsha bhat said...

well, ur prev post says u dream a lot...but then, this post contradicts the prev post...konegondu kanasu beku andre en artha?? ille hele aldane??? and good that u dream....
-Harsha Bhat

Alpazna said...

ಅದ್ಭುತ.. !!

Niveditha said...

@ harshaಭಟ್ರೇ ಇದು ನನ್ನ ಕನಸಿನ ಜೋಳಿಗೆ..
ಮತ್ತೆ ಅಷ್ಟೆಲ್ಲ ಕನಸು ಕಾಣೋ ಕವಿಗೆ ಕನಸಿಗೆ ಬರ ಅಂದ್ರೆ ಕವಿಯ ಪರಿಸ್ಠಿತಿ ಹೆಂಗಿದ್ದಿಕ್ಕು ಹೇಳಿ.. ಅಲ್ದಾ?

@ sandeepa..
thanks.. :)

Harish - ಹರೀಶ said...

"ಅಲ್ಪಜ್ಞ" ಸಂದೀಪನ post ನೋಡಿ ಇಲ್ಲಿಗೆ ಬಂದಿ.. ಚೆನ್ನಾಗಿದ್ದು.. ಬರೀತಿರು

Niveditha said...

to harish
thanks..

ಸಿಮ್ಮಾ said...

ಕವಿತೆಯನ್ನ ಹುಡುಕುತ್ತಲೇ ಉತ್ತಮವಾದ್ದನ್ನ ಎತ್ತಿ(ಕಟ್ಟಿ) ಕೊಟ್ಟದ್ದೀರಿ!

ಯಜ್ಞೇಶ್ (yajnesh) said...

ತುಂಬಾ ಚೆನ್ನಾಗಿದ್ದು.

sunaath said...

ಭಾವಪೂರ್ಣ ಕವಿತೆ.

Niveditha said...

to Simma
ಧನ್ಯವಾದಗಳು.

to yajnesha
ಧನ್ಯವಾದಗಳು.

to sunnath
ಭಾವನೆಗಳ ಹುಡುಕಾಟದಲ್ಲಿ ಬರೆದ ಕವಿತೆ ಅದು.. ನಿಮಗಿಷ್ಟವಾಗಿದ್ದು ಕವಿಗೆ ಭಾವನೆಗಳು ಸಿಕ್ಕಂತಾಯಿತು.
ಧನ್ಯವಾದಗಳು.

ದಿವಂಗತ said...

ನೋವ ನುಂಗುವುದು ಗಂಟಲ ನರ..
ತುಟಿಗಳಿಗೇನು,
ನಗುತ್ತಲೇ ಇರುತ್ತವೆ!!!
ಮೂಕವಾಗಿದ್ದು ಎದೆಯ ಸ್ವರ..
ಕಣ್ಣುಗಳಿಗೇನು,
ಮಾತನಾಡುತ್ತಲೇ ಇರುತ್ತವೆ!!!
ee saalugala bagge hege prathikriyisodu nijakku adhbut

rajendra said...

Hi Nivedita,

Kavite tumba chennagi bardidira...
Keep it up.....

Shobha Hegde said...

Fantastic Lines!!!

Vinay.S said...

ನಿವೇದಿತ, ಕವಿತೆ ತುಂಬಾ ಸೊಗಸಾಗಿದೆ. " ಸಾಲವಾದರೂ ಸರಿ, ನಿಮ್ಮದೊಂದಿಷ್ಟು ಭಾವನೆಗಳನ್ನು ನನಗೂ ಕೊಡಿ!" ಕವಿತೆ ಓದುತ್ತ ಓದುತ್ತ ಹಿಡಿದಿಡುತ್ತದೆ. ಭಾವನೆಗಳು ಚೆನ್ನಾಗಿ ವ್ಯಕ್ತವಾಗಿದೆ. ನಿಮ್ಮ ಬ್ಲಾಗಿಗೆ ನಾನೊಬ್ಬ ಹೊಸ ಸೇರ್ಪಡೆ.
ಶುಭವಾಗಲಿ.

-ವಿನಯ್.

ammud said...

"ಕವಿಗೊಂದಷ್ಟು ಕಂಬನಿ ಬೇಕಿತ್ತು
ಸಾಲವಾದರೂ ಸರಿ
ಮನದ ಭಾರ ಇಳಿಸ ಬೆಕಿತ್ತು"
Ninnee salugalu prathibbralu kabani midisthade...