ಬಾನೆತ್ತರಕ್ಕೆ ಹಾರುತ್ತಿದ್ದೆ ನಾನು
ಮುಗಿಲ ಮುಟ್ಟೇಬಿಡುತ್ತಿದ್ದೆ ಇನ್ನೇನು
ನೀಲಿ ಬಣ್ಣಕ್ಕೆ ಕಣ್ತುಂಬ ಬೆಳಕು
ಅಲ್ಲಲ್ಲಿ ಹರಡಿದೆ ಹತ್ತಿಯ ತುಣುಕು
ಕೈಯಳತೆಯಲ್ಲಿತ್ತು ತಾರೆ
ಜೋತು ನಿಂತ ಚಂದ್ರನಿಗಿಲ್ಲ ಆಸರೆ
ಅಷ್ಟರಲ್ಲೇ.. ಅಲ್ಲೇನೋ ಹೊಸತು!!
ಬೆಳಕಲ್ಲೂ ಹೊಳೆವ ಬೆಳಕು
ಕಣ್ತೆರೆಯಲಾರದಷ್ಟು ಹೊಳಪು..
ಹಿಂದಿನಿಂದ ಮುಂದಿನಿಂದ
ಅಕ್ಕದಿಂದ ಪಕ್ಕದಿಂದ..
ಸುರಿಯುತ್ತಿತ್ತು ಬೆಳ್ಳಗಿನ ಹೊನಲು
ಅದು ಮರೆಯಾಯ್ತು...
ತಾನಾಗಿಯೇ ಕತ್ತಲಾಯ್ತು..
ಜೋತು ನಿಂತ ಚಂದ್ರ ಬಾನಾದ
ತಾರೆಗಳೆಲ್ಲ ಕರಗಿ ಇಬ್ಬನಿಯಾಯ್ತು
ಅರೆರೆ!!
ಮತ್ತೊಂದು ಚಂದ್ರ!!
ಎಷ್ಟೊಂದು ನಕ್ಷತ್ರ!!
ಒಂದು, ಎರಡು, ಮೂರು,
ನೂರು, ಸಾವಿರ, ಲಕ್ಷ..
ಎಣಿಸಿದಷ್ಟೂ ಕಡಿಮಿಯೇ ಏನೋ..
ಅವುಗಳಷ್ಟು ಅಂಕಿಗಳೂ ಇಲ್ಲವೇನೋ...
ಒಂದೊಂದೇ ನಕ್ಷತ್ರ ಕದ್ದೆ,
ಅಂಗಳಕೆ ತಂದು ಚುಕ್ಕಿಯಿಟ್ಟೆ,
ಬೆಳಗಾಗುವುದರೋಳಗೆ ಅದೋ..
ಅದೆಷ್ಟು ಚಂದದ ರಂಗೋಲಿ!!
ಅರೆರೆ.. ಮೇಲೆ ನೋಡಿದರೆ ಬಾನೆಲ್ಲ ಖಾಲಿ ಖಾಲಿ..
ಒಲೆಯ ಕೆಂಪು ಕೆಂಡವನ್ನೂದಿ ಎಸೆದುಬಿಟ್ಟೆ,
’ರವಿ’ ಎಂದು ಹೆಸರಿಟ್ಟು ಆಗಸಕ್ಕೆ ದತ್ತುಕೊಟ್ಟೆ
ಅಷ್ಟಿಷ್ಟು ನಗುವನ್ನುಮಣ್ಣಿಗೆ ಹರಡಿದೆ
ಮಣ್ಣು ಗಿಡವಾಯ್ತು
ಹಸಿರು ಎಲೆ- ಚಿಗುರಾಯ್ತು
ಬಣ್ಣ ಬಣ್ಣದ ಹೂವಾಯ್ತು
ನಗುವಿಂದ ಹೂವೋ, ಹೂವಿಂದ ನಗುವೋ???
ಮತ್ತೆ ಮತ್ತೆ ನಕ್ಕೆ..
ಮೊಗ್ಗರಳಿ ಮತ್ತೆ ಹೂವಾಯ್ತು
ಅಷ್ಟರಲ್ಲಿ ಅಮ್ಮನ ಧ್ವನಿ

"ನಿವೇದಿತಾ ಏಳು ಹೊತ್ತಾಯ್ತು.."

3 comments:

ಮನಸ್ವಿ said...

ಕವಿತೆ ತುಂಬ ಚನ್ನಾಗಿ ಮೂಡಿ ಬಂದಿದೆ

Niveditha said...

@ manaswi
Thanks.. nimma blog kuda channagi ide.

ammud said...

wow this is what i call a BE EE YEY YOU TIFULL dream. This makes ur morning a very good start he he.